ADVERTISEMENT

ಮನ್‌ಪ್ರೀತ್ ವೊಹ್ರಾ ಆಸ್ಟ್ರೇಲಿಯಾದಲ್ಲಿ ಭಾರತದ ಹೈಕಮಿಷನರ್‌

ಪಿಟಿಐ
Published 1 ಮಾರ್ಚ್ 2021, 10:38 IST
Last Updated 1 ಮಾರ್ಚ್ 2021, 10:38 IST
ಮನ್‌ಪ್ರೀತ್ ವೊಹ್ರಾ
ಮನ್‌ಪ್ರೀತ್ ವೊಹ್ರಾ   

ನವದೆಹಲಿ: ‘ಹಿರಿಯ ರಾಜತಾಂತ್ರಿಕ ಅಧಿಕಾರಿ ಮನ್‌ಪ್ರೀತ್ ವೊಹ್ರಾ ಅವರನ್ನು ಆಸ್ಟ್ರೇಲಿಯಾದ ಮುಂದಿನ ಹೈಕಮಿಷನರ್ ಆಗಿ ಭಾರತ ನೇಮಕ ಮಾಡಿದೆ’ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ.

1988ರ ತಂಡದ ಭಾರತೀಯ ವಿದೇಶಾಂಗ ಸೇವೆಯ(ಐಎಫ್‌ಎಸ್‌) ಅಧಿಕಾರಿ ವೊಹ್ರಾ ಅವರು ಪ್ರಸ್ತುತ ಮೆಕ್ಸಿಕೊದಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾವು ಇಂಡೊ–ಫೆಸಿಫಿಕ್ ಪ್ರದೇಶದಲ್ಲಿ ತಮ್ಮ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮನ್‌ಪ್ರೀತ್ ವೊಹ್ರಾ ಅವರನ್ನು ಆಸ್ಟ್ರೇಲಿಯಾದ ಮುಂದಿನ ಹೈಕಮಿಷನರ್ ಆಗಿ ಭಾರತ ನೇಮಕ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.