ADVERTISEMENT

ಕೇರಳಕ್ಕೆ ಜೂ.7ರಂದು ಮುಂಗಾರು ಪ್ರವೇಶ, ತೀವ್ರ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 9:26 IST
Last Updated 7 ಜೂನ್ 2019, 9:26 IST
   

ಕೇರಳ: ಇಲ್ಲಿನ ಕೊಲ್ಲಂ ಸೇರಿದಂತೆಮಳೆ ಬಂದಾಗ ಭೂಕುಸಿತ ಉಂಟಾಗುವಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಹಾಗೂ ತೀವ್ರ ಮಳೆಯಾಗಿ ನೆರೆ ಉಂಟಾಗುವ ಕಡೆ ಎಚ್ಚರಿಕೆ ವಹಿಸುವಂತೆ ಕೇರಳ ಸರ್ಕಾರ ಆದೇಶ ಹೊರಡಿಸಿದೆ.

ಕೇರಳಕ್ಕೆ ಜೂ. 7ಕ್ಕೆ ಮುಂಗಾರು ಪ್ರವೇಶಿಸಲಿದೆ.ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗುವ ಕೊಲ್ಲಂ ಸೇರಿದಂತೆ ಅಕ್ಕಪಕ್ಕದ 7 ಜಿಲ್ಲೆಗಳಲ್ಲಿ ಜೂನ್ 9ರಂದು ಹಾಗೂ ಭಾರಿ ಮಳೆಯಿಂದಾಗಿ ನೆರೆ ಉಂಟಾಗುವ 5 ಜಿಲ್ಲೆಗಳಲ್ಲಿ ಜೂನ್ 10ರಂದು ತೀವ್ರ ಕಟ್ಟೆಚ್ಚರ ವಹಿಸುವಂತೆ ಆದೇಶಿಸಲಾಗಿದೆ.

ಮುಂಗಾರುಮಳೆ ಆರಂಭವಾಗುವ ಮುನ್ನ ಕೇರಳ ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕೇರಳ ರಾಜ್ಯದಲ್ಲಿ ಮುಂಗಾರು ಮಳೆಯಿಂದಾಗಿ ನೆರೆ ಉಂಟಾಗಿ ತತ್ತರಿಸಿದ್ದ ಕಹಿ ಅನುಭವದಿಂದ ಎಚ್ಚೆತ್ತುಕೊಂಡ ಕೇರಳ ಪ್ರತಿ ಮುಂಗಾರಿನಲ್ಲಿಎಚ್ಚರಿಕೆ ವಹಿಸುತ್ತಿದೆ.

ADVERTISEMENT

ಜೂನ್ 10ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು ಕಟ್ಟೆಚ್ಚರ ವಹಿಸಲಾಗಿದೆ. ಕರ್ನಾಟಕದಲ್ಲಿ ಜೂನ್ 12ಕ್ಕೆ ಪ್ರವೇಶಿಸಲಿದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.