ನಕ್ಸಲ್ ಮುಖಂಡ ವಿವೇಕ್ ಸೇರಿದಂತೆ 8 ನಕ್ಸಲರನ್ನು ಹತ್ಯೆ ಮಾಡಿದ ಜಾರ್ಖಂಡ್‌ನ ಬೊಕಾರೊ ಜಿಲ್ಲೆಯ ಲುಗು ಬೆಟ್ಟದಲ್ಲಿ ಸಿಆರ್‌ಪಿಎಫ್‌ನ ಕೋಬ್ರಾ ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿ ಸೋಮವಾರ ಶೋಧ ಕಾರ್ಯಾಚರಣೆ ನಡೆಸಿದರು
–ಪಿಟಿಐ ಚಿತ್ರ
ರಾಂಚಿ/ನವದೆಹಲಿ: ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ಸಿಆರ್‌ಪಿಎಫ್‌ನ ಕೊಬ್ರಾ ಕಮಾಂಡೊಗಳು ಮತ್ತು ಪೊಲೀಸರ ಜತೆ ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಎಂಟು ನಕ್ಸಲರು ಹತರಾಗಿದ್ದಾರೆ.
ಕಾರ್ಯಾಚರಣೆ ಸ್ಥಳದಲ್ಲಿ ಎಕೆ ಸರಣಿಯ ರೈಫಲ್, ಮೂರು ಐಎನ್ಎಸ್ಎಎಸ್ ರೈಫಲ್‌ಗಳು, ಸೆಲ್ಫ್ ಲೋಡಿಂಗ್ ರೈಫಲ್, ಎಂಟು ನಾಡ ಬಂದೂಕುಗಳು ಮತ್ತು ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ. ಎನ್‌ಕೌಂಟರ್‌ನಲ್ಲಿ ಹತ್ಯೆಯಾದ 8 ನಕ್ಸಲರ ವಿರುದ್ಧ ವಿವಿಧ ಹಿಂಸಾಚಾರ ಪ್ರಕರಣಗಳು ದಾಖಲಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರ ಸಂಘಟನೆಯ ಕೇಂದ್ರೀಯ ಸಮಿತಿಯ ಸದಸ್ಯನಾದ ಪ್ರಯಾಗ್ ಮಾಂಝಿ ಅಲಿಯಾಸ್ ವಿವೇಕ್, ವಿಶೇಷ ಪ್ರದೇಶ ಸಮಿತಿ ಸದಸ್ಯ ಅರವಿಂದ್ ಯಾದವ್ ಅಲಿಯಾಸ್ ಅವಿನಾಶ್, ವಲಯ ಸಮಿತಿ ಸದಸ್ಯ ಸಹೆಬ್ರಾಮ್ ಮಾಂಝಿ ಅಲಿಯಾಸ್ ರಾಹುಲ್ ಮಾಂಝಿ, ಮಹೇಶ್ ಮಾಂಝಿ ಅಲಿಯಾ ಮೋಟಾ, ತಾಲು, ರಂಜು ಮಾಂಝಿ, ಗಂಗಾರಾಮ್ ಹಾಗೂ ಮಹೇಶ್ ಹತ್ಯೆಯಾದವರು. ಇದರಲ್ಲಿ ವಿವೇಕ್ ಬಗ್ಗೆ ಸುಳಿವು ನೀಡಿದವರೆಗೆ ₹1 ಕೋಟಿ, ಅರವಿಂದ್ ಬಗ್ಗೆ ಸುಳಿವು ನೀಡಿದವರಿಗೆ ₹25 ಲಕ್ಷ ಹಾಗೂ ಸಹೆಬ್ರಾಮ್ ಮಾಂಝಿ ಸುಳಿವು ನೀಡಿದವರೆಗೆ ₹10 ಲಕ್ಷ ಬಹುಮಾನ ಘೋಷಿಸಲಾಗಿತ್ತು.
ಈ ಎನ್‌ಕೌಂಟರ್ ಮೂಲಕ ಉತ್ತರ ಛೋಟಾನಾಗ್ಪುರ ಪ್ರಾಂತ್ಯದಲ್ಲಿ ಮಾವೊವಾದಿಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲಾಗಿದೆ ಎಂದು ಜಾರ್ಖಂಡ್ ಡಿಜಿಪಿ ಅನುರಾಗ್ ಗುಪ್ತಾ ತಿಳಿಸಿದ್ದಾರೆ.
Quote - ನಕ್ಸಲ್ ವಾದ ತೊಡೆದುಹಾಕುವ ಕಾರ್ಯಾಚರಣೆಯಲ್ಲಿ ನಮ್ಮ ಭದ್ರತಾ ಪಡೆಗಳು ಮತ್ತೊಂದು ಮಹತ್ವದ ಯಶಸ್ಸು ಸಾಧಿಸಿವೆ. ಈ ಕಾರ್ಯಾಚರಣೆ ಮುಂದುವರಿಯಲಿದೆ ಅಮಿತ್ ಶಾ ಕೇಂದ್ರ ಗೃಹ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.