ADVERTISEMENT

ಬಿಹಾರದಲ್ಲಿ ಸಿಡಿಲಿಗೆ ಒಂದೇ ದಿನ 83 ಮಂದಿ ಸಾವು: ನಿತೀಶ್‌ ಪರಿಹಾರ, ಮೋದಿ ಸಂತಾಪ

ಏಜೆನ್ಸೀಸ್
Published 25 ಜೂನ್ 2020, 15:20 IST
Last Updated 25 ಜೂನ್ 2020, 15:20 IST
   

ಪಟಣ: ಬಿಹಾರದಲ್ಲಿ ಮಳೆ ಮತ್ತು ಸಿಡಿಲಿಗೆ ಒಂದೇ ದಿನ 83 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮಧ್ಯಾಹ್ನದ 22 ಇದ್ದ ಸಾವಿನ ಸಂಖ್ಯೆ ರಾತ್ರಿ ಹೊತ್ತಿಗೆ 83ಕ್ಕೆ ಏರಿಕೆಯಾಗಿದೆ. ಗೋಪಾಲ್‌ ಗಂಜ್‌ ಜಿಲ್ಲೆಯೊಂದರಲ್ಲೇ 13 ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ. ನವಾಡದಲ್ಲಿ 8 ಮಂದಿ ಸತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಸಿಡಿಲಿನಿಂದಾಗಿ ಮೃತಪಟ್ಟವರ ಕುಟುಂಬಕ್ಕೆ ಬಿಹಾರದ ಮುಖ್ಯಮಂತ್ರಿನಿತೀಶ್‌ ಕುಮಾರ್‌ ಅವರ ನೇತೃತ್ವದ ಸರ್ಕಾರ ತಲಾ ₹4 ಲಕ್ಷ ಪರಿಹಾರ ಘೋಷಣೆ ಮಾಡಿದೆ.

ADVERTISEMENT

ಮೋದಿ ಸಂತಾಪ

ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಸಿಡಿಲು ಮತ್ತು ಮಳೆಗೆ ಹಲವು ಜೀವಗಳು ಬಲಿಯಾದ ದುರಂತಮಯ ಸುದ್ದಿ ತಿಳಿಯಿತು. ರಾಜ್ಯ ಸರ್ಕಾರಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದು ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.