ADVERTISEMENT

ಹಲವು ರಾಜ್ಯಗಳು ರೈತರ ಆತ್ಮಹತ್ಯೆ ಕುರಿತ ಮಾಹಿತಿ ನೀಡುತ್ತಿಲ್ಲ: ಕೇಂದ್ರ ಸಚಿವ

ಪಿಟಿಐ
Published 21 ಸೆಪ್ಟೆಂಬರ್ 2020, 7:59 IST
Last Updated 21 ಸೆಪ್ಟೆಂಬರ್ 2020, 7:59 IST
ಸಂಸತ್‌ ಭವನ
ಸಂಸತ್‌ ಭವನ    

ನವದೆಹಲಿ: ದೇಶದ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರೈತ ಆತ್ಮಹತ್ಯೆಗಳ ವಿವರಗಳನ್ನು ನೀಡಿಲ್ಲ. ಹೀಗಾಗಿ ರೈತರ ಆತ್ಮಹತ್ಯೆಯ ಕಾರಣಗಳ ಕುರಿತ ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (ಎನ್‌ಸಿಆರ್‌ಬಿ) ಮಾಹಿತಿಯನ್ನು ಒಪ್ಪಲಾಗದು ಮತ್ತು ಅದನ್ನು ಪ್ರಕಟಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆಗಳ ಕುರಿತ ಇತ್ತೀಚಿನ ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ, 2019 ರಲ್ಲಿ 10,281 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು 2018ಕ್ಕಿಂತ (10,357) ಕಡಿಮೆ. ಕೃಷಿ ಕ್ಷೇತ್ರದ ಆತ್ಮಹತ್ಯೆ ಪ್ರಮಾಣವು ದೇಶದ ಒಟ್ಟು ಆತ್ಮಹತ್ಯೆಗಳಲ್ಲಿ ಶೇಕಡಾ 7.4 ರಷ್ಟಿದೆ (5,957 ರೈತರು ಮತ್ತು 4,324 ಕೃಷಿ ಕಾರ್ಮಿಕರು) ಎಂದು ಹೇಳಲಾಗಿತ್ತು.

ಈ ಕುರಿತು ಲಿಖಿತ ಉತ್ತರ ನೀಡಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಎನ್‌ಸಿಆರ್‌ಬಿ ತಿಳಿಸಿದಂತೆ ಪರಿಶೀಲನೆಗಳ ನಂತರವೂ ಹಲವು ರಾಜ್ಯಗಳು ರೈತರ ಆತ್ಮಹತ್ಯೆ ಕುರಿತಂತೆ ವರದಿಯನ್ನೆ ನೀಡಿಲ್ಲ. ಈ ಮಿತಿಯಿಂದಾಗಿ, ರೈತರ ಆತ್ಮಹತ್ಯೆಯ ಕಾರಣಗಳ ಕುರಿತ ರಾಷ್ಟ್ರೀಯ ಮಾಹಿತಿಯು ಒಪ್ಪಿತವಾಗಿಲ್ಲ ಮತ್ತು ಪ್ರಕಟಿಸಲಾಗಿಲ್ಲ,’ ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.