ADVERTISEMENT

ಡಿವೈಎಫ್‌ಐ ಕಾರ್ಯಕರ್ತ ಸಾವು

ಪಶ್ಚಿಮ ಬಂಗಾಳದ ರಾಜಕೀಯ ಪಕ್ಷಗಳ ನಡುವೆ ಕಿಡಿ ಹೊತ್ತಿಸಿದ ಘಟನೆ

ಪಿಟಿಐ
Published 15 ಫೆಬ್ರುವರಿ 2021, 7:34 IST
Last Updated 15 ಫೆಬ್ರುವರಿ 2021, 7:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತಾ: ಕಳೆದ ಗುರುವಾರ ಎಡಪಕ್ಷಗಳು ಆಯೋಜಿಸಿದ್ದ ‘ಸಚಿವಾಲಯ ಚಲೋ‘ ಮೆರವಣಿಗೆ ವೇಳೆ ಪೊಲೀಸರೊಂದಿಗೆ ನಡೆದ ಸಂಘರ್ಷದಲ್ಲಿ ಗಾಯಗೊಂಡಿದ್ದ ಡಿವೈಎಫ್‌ಐ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ. ಹೀಗಾಗಿ ಟಿಎಂಸಿ ಮತ್ತು ಎಡಪಕ್ಷಗಳ ನಡುವಿನ ರಾಜಕೀಯ ವಿರಸ ತೀವ್ರಗೊಂಡಿದೆ.

ಡಿವೈಎಫ್‌ಐ ಕಾರ್ಯಕರ್ತನ ಸಾವನ್ನು ಕೊಲೆ ಎಂದು ಸಿಪಿಎಂ ಕರೆದರೆ, ಇದೊಂದು ‘ಆತ್ಮಹತ್ಯೆ’ ಎಂದು ಟಿಎಂಸಿ ಹೇಳಿದೆ.

ಬಂಕುರ ಜಿಲ್ಲೆಯ ಕೊತುಲ್‌ಪುರದ ನಿವಾಸಿ ಮೈದುಲಾ ಇಸ್ಲಾ ಮಿಡ್ಡಾ ಸಾವನ್ನಪ್ಪಿದ ಕಾರ್ಯಕರ್ತ. ಅವರ ಸಾವಿಗೆ ಸಂಬಂಧಿಸಿದಂತೆ ಷೇಕ್ಸ್‌ಪಿಯರ್ ಸರಾನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಕುರಿತು ತನಿಖೆ ನಡೆಸುತ್ತಿರುವುದಾಗಿ ಕೋಲ್ಕತಾ ಪೊಲೀಸ್ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.