ADVERTISEMENT

ಮುಂಬೈ: ₹14.73 ಕೋಟಿ ಮೌಲ್ಯದ ಮಾದಕ ವಸ್ತು ವಶ

ಪಿಟಿಐ
Published 4 ಆಗಸ್ಟ್ 2025, 17:38 IST
Last Updated 4 ಆಗಸ್ಟ್ 2025, 17:38 IST
---
---   

ಮುಂಬೈ: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ತೆರಿಗೆ ವಿಭಾಗದ ಅಧಿಕಾರಿಗಳು ಭಾನುವಾರ ಪ್ರಯಾಣಿಕರೊಬ್ಬರನ್ನು ಬಂಧಿಸಿ ₹ 14.73 ಕೋಟಿ ಮೌಲ್ಯದ 15 ಕೆಜಿ ತೂಕದ ಮಾದಕ ವಸ್ತು ಗಾಂಜಾವನ್ನು (ಮರಿಜುವಾನ) ವಶಕ್ಕೆ ಪಡೆದಿದ್ದಾರೆ.

ಬ್ಯಾಂಕಾಕ್‌ನಿಂದ ಛತ್ರಪತಿ ಶಿವಾಜಿ ಮಹಾರಾಜ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನ ಬಳಿ ‘ವಿದೇಶಾಂಗ ವ್ಯವಹಾರಗಳ ಇಲಾಖೆಯ ಸರಕು’ ಎಂಬ ಪಟ್ಟಿ ಹಾಕಿದ್ದ ಪೊಟ್ಟಣ ಪತ್ತೆಯಾಗಿತ್ತು. ತಪಾಸಣೆ ಮಾಡಿದಾಗ 14 ಕೆ.ಜಿ.ಗೂ ಹೆಚ್ಚು ಮರಿಜುವಾನ ದೊರಕಿತ್ತು. ರಾಷ್ಟ್ರೀಯ ಸುರಕ್ಷತೆಗೆ ಸಂಬಂಧಿಸಿದ ರಹಸ್ಯ ರಾಜತಾಂತ್ರಿಕ ಸರಕು ಎಂದು ಸುಳ್ಳು ಹೇಳಿ ಈತ ಮಾದಕ ವಸ್ತು ಸಾಗಣೆ ಮಾಡುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳ್ಳಮಾಲನ್ನು ವಿದೇಶಾಂಗ ಇಲಾಖೆ ಅಧಿಕೃತ ಗುರುತು ಮತ್ತು ಟೇಪ್‌ ಇದ್ದ ಕವರ್‌ನಲ್ಲಿ ಮುಚ್ಚಿಡಲಾಗಿತ್ತು. ಬಂಧಿತನ ಬಳಿ ಇದ್ದ ಟ್ರಾಲಿಬ್ಯಾಗ್‌ನಲ್ಲಿ ವಿಶ್ವಸಂಸ್ಥೆ ಕಚೇರಿಯ ಔಷಧಿ ಮತ್ತು ಅಪರಾಧ ವಿಭಾಗದ (ಯುಎನ್‌ಒಡಿಸಿ) ನಕಲಿ ದಾಖಲೆಗಳು ಮತ್ತು ರಹಸ್ಯ ವರದಿಗಳು ಇದ್ದವು. ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್‌ಡಿಪಿಎಸ್‌) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.