ADVERTISEMENT

ಅಫ್ಗಾನ್‌ ಜೈಲಿನ ಸಮೀಪ ಉಗ್ರರ ದಾಳಿ; 75 ಕೈದಿಗಳು ಸಾಮೂಹಿಕ ಪರಾರಿ

ರಾಯಿಟರ್ಸ್
Published 3 ಆಗಸ್ಟ್ 2020, 8:07 IST
Last Updated 3 ಆಗಸ್ಟ್ 2020, 8:07 IST
ಉಗ್ರರು ದಾಳಿ ನಡೆಸಿದ ಅಪ್ಗಾನಿಸ್ತಾನದ ಜಲಾಲಬಾದ್‌ನಲ್ಲಿ ಜೈಲ್‌ ಸಮೀಪದಲ್ಲಿ ರಕ್ಷಣೆಗೆ ನಿಂತಿರುವ ಭದ್ರತಾ ಸಿಬ್ಬಂದಿ.
ಉಗ್ರರು ದಾಳಿ ನಡೆಸಿದ ಅಪ್ಗಾನಿಸ್ತಾನದ ಜಲಾಲಬಾದ್‌ನಲ್ಲಿ ಜೈಲ್‌ ಸಮೀಪದಲ್ಲಿ ರಕ್ಷಣೆಗೆ ನಿಂತಿರುವ ಭದ್ರತಾ ಸಿಬ್ಬಂದಿ.   

ಜಲಾಲಬಾದ್‌ (ಅ‍‍ಫ್ಗಾನಿಸ್ತಾನ): ನಗರದ ಪಶ್ಚಿಮಭಾಗದಲ್ಲಿರುವ ಜೈಲಿನ ಸಮೀಪ ಸೋಮವಾರ ಮುಂಜಾನೆ ಅ‍‍ಫ್ಗಾನ್‌ ಭದ್ರತಾ ಪಡೆಗಳು ಮತ್ತು ಐಎಸ್‌(ಇಸ್ಲಾಮಿಕ್ ಸ್ಟೇಟ್‌) ಉಗ್ರರು ನಡುವೆ ನಡೆದ ಸಂಘರ್ಷದಲ್ಲಿ ಐವರು ನಾಗರಿಕರು ಸಾವನ್ನಪ್ಪಿದ್ದಾರೆ. 40 ಮಂದಿ ಗಾಯಗೊಂಡಿದ್ದಾರೆ.

ಉಗ್ರರು–ಭದ್ರತಾ ಪಡೆಯ ನಡುವಿನ ’ಸಂಘರ್ಷ’ದ ಲಾಭ ಪಡೆದ ಪಡೆದ 75 ಕೈದಿಗಳು ಜೈಲಿನಿಂದ ಸಾಮೂಹಿಕವಾಗಿ ಪರಾರಿಯಾಗಿದ್ದಾರೆ.

ಭಾನುವಾರ ರಾತ್ರಿಯಿಂದಲೇ ಉಗ್ರರ ದಾಳಿ ಆರಂಭವಾಗಿದೆ. ಮೊದಲು ಜೈಲಿನ ಪ್ರವೇಶ ದ್ವಾರದಲ್ಲಿ ಕಾರ್‌ಬಾಂಬ್‌ ಸ್ಪೋಟಿಸಿದ್ದಾರೆ. ನಂತರ ಸುತ್ತಮುತ್ತಲೂ ಬಾಂಬ್‌ ಸ್ಫೋಟಿಸಿರುವ ಘಟನೆಗಳು ನಡೆದಿವೆ. ಜತೆಗೆ ಉಗ್ರರು ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ನಂಗರ್‌ಹಾರ್ ಪ್ರಾಂತ್ಯದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪೊಲೀಸರು ಮತ್ತು ಭದ್ರತಾಪಡೆಯ ಗಮನವನ್ನು ಬೇರೆಡೆ ಸೆಳೆಯಲು ಈ ರೀತಿ ಜೈಲಿನ ಸಮೀಪವೇ ಉಗ್ರರು ದಾಳಿ ನಡೆಸಿದ್ದಾರೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.