ಹುಣಸೂರು: ಪೌಷ್ಟಿಕ ಆಹಾರ ಸೇವನೆಯಿಂದ ತಾಯಿ ಮಗುವಿನ ಆರೋಗ್ಯ ಸುಧಾರಣೆ ಸಾಧ್ಯವಿದ್ದು, ಹಸಿರು ಸೊಪ್ಪು ಸೇರಿ ಮೊಳಕೆ ಕಾಳುಗಳನ್ನು ಸೇವಿಸಬೇಕು ಎಂದು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಭಾಗ್ಯಮ್ಮ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಪೋಷಣ್ ಅಭಿಯಾನ ಸಪ್ತಾಹ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೌಷ್ಟಿಕ ಆಹಾರ ಸೇವನೆ ಕುರಿತು ಗರ್ಭಿಣಿಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರದಾದ್ಯಂತ ಅಭಿಯಾನ ನಡೆದಿದೆ. ಈ ಅಭಿಯಾನದಲ್ಲಿ ನುರಿತ ವೈದ್ಯರಿಂದ ಗರ್ಭಿಣಿಯರಿಗೆ ಪೋಷಕಾಂಶ ಇರುವ ಪದಾರ್ಥಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿಗೊಳಿಸುವ ಕೆಲಸ ನಿರಂತವಾಗಿ ನಡೆದಿದೆ. ಜೀವನದಲ್ಲಿ ದುಡಿಮೆ ಜತೆಗೆ ಆರೋಗ್ಯ ಭಾಗ್ಯವನ್ನು ಕಾದುಕೊಳ್ಳಬೇಕಾದ ಜವಾಬ್ದಾರಿ ಇದ್ದು, ಗರ್ಭಿಣಿ ಮತ್ತು ಹೆರಿಗೆ ಬಾಣಂತನ ಹೀಗೆ ಹಲವು ಹಂತಗಳನ್ನು ದಾಟಿ ನಮ್ಮ ಆರೋಗ್ಯ ಕಾದುಕೊಳ್ಳಬೇಕಾಗಿದೆ. ಮಹಿಳೆ ಆರೋಗ್ಯದ ಸುರಕ್ಷಣೆ ಕಾಯ್ದುಕೊಳ್ಳುವಲ್ಲಿ ತಾತ್ಸರ ತೋರಿಸದೆ ಎಚ್ಚರಿಕೆ ವಹಿಸಬೇಕಾಗಿದೆ ಎಂದರು.
ಜಂಕ್ ಫುಡ್ ಮಾರಕ: ಇತ್ತೀಚಿನ ದಿನದಲ್ಲಿ ಮಾರುಕಟ್ಟೆಯಲ್ಲಿ ಮತ್ತು ಆನನ್‌ಲೈನ್‌ಗಳಲ್ಲಿ ಜಂಕ್‌ಫುಡ್ ಜನರನ್ನು ಹೆಚ್ಚಾಗಿ ಆಕರ್ಷಿಸುತ್ತಿದ್ದು, ಈ ಆಹಾರದ ಬೆನ್ನು ಹತ್ತದೆ ಮೊಳಕೆ ಒಡೆದ ಕಾಳು ಸೇರಿ ಆರೋಗ್ಯಕರ ಖಾದ್ಯ ಸಿದ್ಧಪಡಿಸಿ ಸೇವಿಸುವುದರಿಂದ ನಿಮ್ಮ ಮತ್ತು ಮಕ್ಕಳ ಆರೋಗ್ಯ ಸುಧಾರಣೆ ಸಾಧ್ಯ. ಜಂಕ್‌ಫುಡ್ ಹೆಚ್ಚಾಗಿ ಸೇವಿಸುವುದರಿಂದ ನಾಲಿಗೆಗೆ ತೃಪ್ತಿ ಸಿಕ್ಕರೂ ಆರೋಗ್ಯಕ್ಕೆ ಮಾರಕ ಎಂದರು.
ವಕೀಲರ ಸಂಘದ ಅಧ್ಯಕ್ಷ ಶಿವಣ್ಣೇಗೌಡ, ಸಂಪನ್ಮೂಲವ್ಯಕ್ತಿ ವಕೀಲೆ ಪವಿತ್ರ ಮಾತನಾಡಿದರು.
ವೈದ್ಯ ಡಾ.ಶಶಾಂಕ್ ಪೌಷ್ಟಿಕ ಆಹಾರ ಕುರಿತು ಮಾಹಿತಿ ನೀಡಿದರು. ಸಹಾಯಕ ಸರ್ಕಾರಿ ಅಭಿಯೋಜಕಿ ಪಾರ್ವತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಹರೀಶ್, ಆರೋಗ್ಯ ಇಲಾಖೆ ರಾಜೇಶ್ವರಿ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಸೋಮಯ್ಯ, ಸ್ವಾಮಿ ಡಿ.ಎಸ್. ಮತ್ತು ವಿವಿಧ ಅಂಗನವಾಡಿ ಕೇಂದ್ರದ ಕಾರ್ಯರ್ತರು ಹಾಗೂ ಗರ್ಭಿಣಿಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.