ADVERTISEMENT

ಸಂವಿಧಾನದ ಪ್ರತಿಕೃತಿ ನಾಶ: ಮಾಯಾವತಿ, ಅಖಿಲೇಶ್‌ ಖಂಡನೆ

ಪಿಟಿಐ
Published 12 ಡಿಸೆಂಬರ್ 2024, 14:27 IST
Last Updated 12 ಡಿಸೆಂಬರ್ 2024, 14:27 IST
ಮಾಯಾವತಿ–ಪಿಟಿಐ ಚಿತ್ರ
ಮಾಯಾವತಿ–ಪಿಟಿಐ ಚಿತ್ರ   

ಲಖನೌ: ಮಹಾರಾಷ್ಟ್ರದ ಪರ್ಭಣಿ ನಗರದಲ್ಲಿ ಸಂವಿಧಾನದ ಪ್ರತಿಕೃತಿಯನ್ನು ನಾಶಗೊಳಿಸಿರುವುದನ್ನು ಬಹುಜನ್‌ ಸಮಾಜವಾದಿ ಪಕ್ಷದ ಅಧ್ಯಕ್ಷೆ ಮಾಯಾವತಿ ಖಂಡಿಸಿದ್ದು, ಜನರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

‘ಭಾರತರತ್ನ ಬಾಬಾ ಸಾಹೇಬ್‌ ಅಂಬೇಡ್ಕರ್‌ ಪ್ರತಿಮೆ ಹಾಗೂ ಸಂವಿಧಾನದ ಪೃತಿಕೃತಿಗೆ ಅಗೌರವ ತೋರಿರುವುದು ಅತ್ಯಂತ ಖಂಡನೀಯ ಹಾಗೂ ನಾಚಿಕೆಗೇಡಿನ ವಿಚಾರವಾಗಿದೆ. ಈ ಘಟನೆ ಕುರಿತಂತೆ ಪಕ್ಷವು ತೀವ್ರ ಬೇಸರ ವ್ಯಕ್ತಪಡಿಸುತ್ತದೆ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಸಮಾಜ ವಿರೋಧಿ ಕೃತ್ಯವೆಸಗಿದವರನ್ನು ಕೂಡಲೇ ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ’ ಎಂದು ಅವರು ಎಚ್ಚರಿಸಿದ್ದಾರೆ.

ADVERTISEMENT

‘ಅಕ್ರಮ ಮಾರ್ಗದ ಮೂಲಕ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ, ಯಾರ ಆದೇಶದಂತೆ ಸಂವಿಧಾನದ ಪ್ರತಿಕೃತಿಯನ್ನು ಒಡೆಯುವ ನಿರ್ಧಾರ ತೆಗೆದುಕೊಂಡರು? ಈ ಕುರಿತು ವಿಸ್ತೃತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಬೇಕು’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಒತ್ತಾಯಿಸಿದ್ದಾರೆ.

ನಾಲ್ವರ ಬಂಧನ: ‘ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ‘ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಅಖಿಲೇಶ್‌ ಯಾದವ್‌–ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.