ADVERTISEMENT

ಆಡಳಿತದಲ್ಲಿ ಎಸ್‌ಪಿ–ಬಿಜೆಪಿ ನಡುವೆ ವ್ಯತ್ಯಾಸಗಳೇ ಇಲ್ಲ: ಮಾಯಾವತಿ ಟೀಕೆ

ಪಿಟಿಐ
Published 18 ಆಗಸ್ಟ್ 2020, 11:58 IST
Last Updated 18 ಆಗಸ್ಟ್ 2020, 11:58 IST
ಮಾಯಾವತಿ
ಮಾಯಾವತಿ   

ಲಖನೌ(ಉತ್ತರ ಪ್ರದೇಶ): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ದುಸ್ಥಿತಿಯ ಬಗ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ, ‘ಜನರಿಗೆ ಈ ಹಿಂದಿನ ಸಮಾಜವಾದಿ ಪಕ್ಷದ ಆಡಳಿತಕ್ಕೂ ಈಗಿನ ಬಿಜೆಪಿ ಆಡಳಿತಕ್ಕೂ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ’ ಎಂದಿದ್ದಾರೆ.

‘ರಾಜ್ಯದಲ್ಲಿ ದಲಿತರು ಸೇರಿದಂತೆ ವಿವಿಧ ವರ್ಗಗಳ ಜನರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕೊಲೆ, ದೌರ್ಜನ್ಯ ‘ನಾಚಿಕೆಗೇಡಿನ’ ವಿಷಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಸ್ಥಿತಿ ಹೀನಾಯವಾಗಿದೆ. ಸರ್ಕಾರ ತಕ್ಷಣವೇ ಇದರತ್ತ ಗಮನಹರಿಸಬೇಕು’ ಎಂದು ಸರಣಿ ಟ್ವೀಟ್‌ಗಳ ಮುಖಾಂತರ ಮಾಯಾವತಿ ಹೇಳಿದ್ದಾರೆ.

‘ಹಿಂದಿನ ಸರ್ಕಾರದ ಆಡಳಿತಕ್ಕೂ ಈಗಿನ ಸರ್ಕಾರ ಆಡಳಿತಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಕಾಂಗ್ರೆಸ್‌ ಸರ್ಕಾರ ಆಡಳಿತದಲ್ಲಿ ಇದ್ದ ಕಾಲದಲ್ಲಿ ಸಂತ್ರಸ್ತರ ಎಫ್‌ಐಆರ್‌ ಕೂಡಾ ದಾಖಲಾಗುತ್ತಿರಲಿಲ್ಲ. ಅಂದು ಮಾಧ್ಯಮಗಳು ಇಂದಿನಷ್ಟು ಚುರುಕಾಗಿರಲಿಲ್ಲ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.