ADVERTISEMENT

‘ನೀಟ್‌’ ದಿನಾಂಕ ಮುಂದೂಡಲು ವಿದ್ಯಾರ್ಥಿಗಳ ಆಗ್ರಹ

ಪಿಟಿಐ
Published 23 ಜೂನ್ 2022, 16:16 IST
Last Updated 23 ಜೂನ್ 2022, 16:16 IST

ನವದೆಹಲಿ: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಜುಲೈ 17ರಂದು ನಿಗದಿಯಾಗಿರುವ ‘ನೀಟ್‌’ ಪರೀಕ್ಷೆಯನ್ನು ಮುಂದೂಡುವಂತೆ ಸಾವಿರಾರು ಆಕಾಂಕ್ಷಿ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಸಿಇಟಿ–ಯುಜಿ) ಜುಲೈ 15ರಿಂದ ಆಗಸ್ಟ್‌ 20ರವರೆಗೆ ನಡೆಯಲಿದೆ. ‘ನೀಟ್‌’ ಪರೀಕ್ಷಾ ದಿನದ ಸಮೀಪವೇ ಜೆಇಇ ಪರೀಕ್ಷೆ ಕೂಡ ನಿಗದಿಯಾಗಿದೆ. ಹೀಗಾಗಿ ಪರೀಕ್ಷಾ ತಯಾರಿಗೆ ಸಮಯಾವಕಾಶವೇ ದೊರೆಯುವುದಿಲ್ಲ. ಆದ್ದರಿಂದ ನೀಟ್‌ ಪರೀಕ್ಷೆಯನ್ನು ಮುಂದೂಡಿ ಎಂದು ವಿದ್ಯಾರ್ಥಿಗಳು ಆನ್‌ಲೈನ್‌ ಅಭಿಯಾನ ಹಮ್ಮಿಕೊಂಡಿದ್ದಾರೆ.

ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ 24 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಹಿ ಮಾಡಿರುವ ಅರ್ಜಿಗೆ ಟ್ವಿಟರ್‌ನಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.