ADVERTISEMENT

ತಮಿಳುನಾಡು: ವೈದ್ಯಕೀಯ ಕೋರ್ಸ್‌ನ ಆಕಾಂಕ್ಷಿಯ ಆತ್ಮಹತ್ಯೆ

ಪಿಟಿಐ
Published 30 ಅಕ್ಟೋಬರ್ 2021, 8:13 IST
Last Updated 30 ಅಕ್ಟೋಬರ್ 2021, 8:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಯಮತ್ತೂರು: ‌ವೈದ್ಯಕೀಯ ಪದವಿ ಕೋರ್ಸ್‌ ಪ್ರವೇಶಕ್ಕೆ ನಡೆಯುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್‌) ಫಲಿತಾಂಶದ ಬಗ್ಗೆ ಆತಂಕಗೊಂಡಿದ್ದ 20 ವರ್ಷದ ಯುವಕರೊಬ್ಬರು ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೆಪ್ಟೆಂಬರ್‌ನಲ್ಲಿ ನಡೆದಿದ್ದ ನೀಟ್‌ ಪರೀಕ್ಷೆ ಬರೆದಿದ್ದ ಕೆ. ಕೀರ್ತಿವಾಸನ್‌ ಎಂಬುವರೇ ಆತ್ಮಹತ್ಯೆ ಮಾಡಿಕೊಂಡ ಯುವಕ.

ಇದಕ್ಕೂ ಮುನ್ನ ಎರಡು (2019,2020) ಬಾರಿ ನೀಟ್‌ ಪರೀಕ್ಷೆ ಬರೆದಿದ್ದ ಅವರು ವೈದ್ಯಕೀಯ ಸೀಟು ಗಿಟ್ಟಿಸುವಲ್ಲಿ ವಿಫಲರಾಗಿದ್ದರು.

ADVERTISEMENT

ಮೂರನೇ ಬಾರಿ ನೀಟ್‌ ಪರೀಕ್ಷೆ ಬರೆದಿದ್ದ ಅವರು ಕೀ–ಉತ್ತರಗಳನ್ನು ಗಮನಿಸಿ ನಿರಾಸೆ ಹೊಂದಿದ್ದರು. ಈ ಬಾರಿಯೂ ವೈದ್ಯಕೀಯ ಸೀಟು ದೊರೆಯುವ ಸಾಧ್ಯತೆ ಇಲ್ಲ ಎಂದು ಪೋಷಕರ ಬಳಿ ಹೇಳಿಕೊಂಡಿದ್ದರು.

ಪೋಷಕರು ಫಲಿತಾಂಶ ಬರುವವರೆಗೆ ಕಾಯೋಣ ಎಂದು ಹೇಳಿದ್ದರು. ಆದರೆ ಫಲಿತಾಂಶ ಬರುವುದಕ್ಕೂ ಮುನ್ನವೇ ಯುವಕ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.