ADVERTISEMENT

ಆಗಸ್ಟ್‌ 1ಕ್ಕೆ ನೀಟ್‌ ಪರೀಕ್ಷೆ: ರಾಷ್ಡ್ರೀಯ ಪರೀಕ್ಷಾ ಏಜೆನ್ಸಿ

ಪಿಟಿಐ
Published 12 ಮಾರ್ಚ್ 2021, 20:45 IST
Last Updated 12 ಮಾರ್ಚ್ 2021, 20:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯು(ನೀಟ್‌) ಆಗಸ್ಟ್‌ 1ರಂದು ನಡೆಯಲಿದೆ ಎಂದು ರಾಷ್ಡ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಶುಕ್ರವಾರ ಘೋಷಿಸಿದೆ.

ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್, ಬಿಎಸ್ಎಂಎಸ್, ಬಿಯುಎಂಎಸ್‌ ಮತ್ತು ಬಿಹೆಚ್ಎಂಎಸ್ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯಲಿರುವ ನೀಟ್‌ (ಯುಜಿ) 2021 ಪರೀಕ್ಷೆಯನ್ನು ಮಾರ್ಗಸೂಚಿಗಳು ಮತ್ತು ನಿಬಂಧನೆಗಳ ಪ್ರಕಾರ ನಡೆಸಲಾಗುತ್ತದೆ ಎಂದು ಎನ್‌ಟಿಎ ಹೇಳಿದೆ.

ಈ ಪರೀಕ್ಷೆಯು ಹಿಂದಿ, ಇಂಗ್ಲಿಷ್‌ ಸೇರಿದಂತೆ 11 ಭಾಷೆಗಳಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ನೀಟ್‌ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾದಾಗ ಪರೀಕ್ಷೆ, ಸಿಲೆಬಸ್‌, ವಯಸ್ಸಿನ ಅರ್ಹತೆ, ಮೀಸಲಾತಿ, ಲಭ್ಯವಿರುವ ಸೀಟುಗಳ ವಿಭಾಗ, ಶುಲ್ಕ, ಪರೀಕ್ಷೆ ನಡೆಯುವ ನಗರಗಳು ಸೇರಿದಂತೆ ಎಲ್ಲಾ ವಿವರವಾದ ಮಾಹಿತಿಯನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.