ADVERTISEMENT

ಶಾರದ ಪೀಠದ ದಾರಿಯನ್ನು ತೆರೆಯಬೇಕು–ಮೆಹಬೂಬಾ ಮುಫ್ತಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 8:21 IST
Last Updated 26 ಮಾರ್ಚ್ 2019, 8:21 IST
   

ಶ್ರೀನಗರ:ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದ ಪೀಠ ದೇಗುಲವನ್ನ ಕಾಶ್ಮೀರಿ ಪಂಡಿತರಿಗೆ ಪ್ರವೇಶಿಸಲುಅನುವು ಮಾಡಿದರೆ, ಪ್ರಸ್ತುತ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಸಹಕಾರಿಯಾಗಬಹುದು ಎಂದು ‍ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿಹೇಳಿಕೆ ನೀಡಿದ್ದಾರೆ

ಶಾರದ ಪೀಠ ದೇಗುಲದ ದಾರಿಯನ್ನು ಕಾಶ್ಮೀರಿ ಪಂಡಿತರಿಗೆ ತೆರೆಯಬೇಕು.ಇಂತಹನಡೆಗಳು ಭಾರತ ಪಾಕಿಸ್ತಾನದ ನಡುವೆ ನೆಲೆಸಿರುವ ದ್ವೇಷದ ವಾತಾವರಣಹೋಗಲಾಡಿಸುವಲ್ಲಿ ಸಹಕಾರಿಯಾಗುತ್ತದೆ.ಈ ಕುರಿತು ನಾನು ಪ್ರಧಾನಿಯವರಿಗೆ ಪತ್ರ ಬರೆದಿದ್ದೇನೆ ಎಂದು ಮೆಹಬೂಬಾ ಮುಫ್ತಿ ಟ್ವೀಟ್‌ ಮಾಡಿದ್ದಾರೆ.

ಪಾಕಿಸ್ತಾನ ಸರ್ಕಾರ ಶಾರದ ಪೀಠಕ್ಕೆ ಹೋಗುವ ದಾರಿಯನ್ನ ತರೆಯುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಕಳೆದ ಒಂದು ವರ್ಷಗಳಿಂದ ಕಾಶ್ಮೀರಿ ಪಂಡಿತರ ಸಂಘಟನೆಯು ಶಾರದ ಪೀಠದ ರಸ್ತೆಯನ್ನು ತೆರೆಯುವಂತೆ ಆಗ್ರಹಿಸಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.