ADVERTISEMENT

ಹಿಮಾಲಯ ಸೇರಿ ಪರ್ವತ ಶ್ರೇಣಿಗಳಲ್ಲಿ ಕರಗುತ್ತಿರುವ ಹಿಮಗಡ್ಡೆ; ತಾಪಮಾನ ಏರಿಕೆ 

ಪಿಟಿಐ
Published 25 ನವೆಂಬರ್ 2025, 15:38 IST
Last Updated 25 ನವೆಂಬರ್ 2025, 15:38 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ನವದೆಹಲಿ: ಹಿಮಾಲಯ ಸೇರಿದಂತೆ ಪರ್ವತ ಶ್ರೇಣಿಗಳಲ್ಲಿ ಕಳೆದ 75 ವರ್ಷಗಳಲ್ಲಿ ತಾಪಮಾನ ಹೆಚ್ಚಳವು ಜಾಗತಿಕ ಸರಾಸರಿಗಿಂತ ಶೇ 50ರಷ್ಟು ಏರಿಕೆಯಾಗಿದೆ. ಇದು ಭಾರತ, ಚೀನಾ ಸೇರಿ ಈ ವಲಯವನ್ನು ಅವಲಂಬಿಸಿರುವ ಸುಮಾರು 100 ಕೋಟಿ ಜನರ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರಲಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. 

ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ ಏರಿಕೆಯಿಂದ ಹಿಮಗಡ್ಡೆಗಳು ದೊಡ್ಡ ಪ್ರಮಾಣದಲ್ಲಿ ಕರಗುತ್ತಿವೆ. ಇದರಿಂದ 1980–2020ರ ಅವಧಿಯಲ್ಲಿ ತಗ್ಗುಪ್ರದೇಶಗಳು ಮತ್ತು ಪರ್ವತ ಶ್ರೇಣಿಗಳಲ್ಲಿ ತಾಪಮಾನವು 0.21 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಿದೆ ಎಂದು ‘ನೇಚರ್‌ ರಿವ್ಯೂಸ್‌ ಅರ್ಥ್ ಆ್ಯಂಡ್‌ ಎನ್ವಿರಾನ್ಮೆಂಟ್‌’ ಜರ್ನಲ್‌ನಲ್ಲಿ ಪ್ರಕಟಗೊಂಡಿರುವ ವರದಿ ತಿಳಿಸಿದೆ. 

ಬ್ರಿಟನ್‌ ಪೋಟ್ಸ್‌ಮೌತ್‌ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಂತರರಾಷ್ಟ್ರೀಯ ಸಂಶೋಧಕರ ತಂಡ ‘ಎತ್ತರ ಅವಲಂಬಿತ ಹವಾಮಾನ ಬದಲಾವಣೆ’ ಕುರಿತು ಅಧ್ಯಯನ ನಡೆಸಿದೆ. 

ADVERTISEMENT

‘ಆರ್ಕ್ಟಿಕ್ ವಲಯದೊಂದಿಗೆ ಹಲವು ಗುಣಲಕ್ಷಣಗಳನ್ನು ಹಂಚಿಕೊಳ್ಳುವ ಹಿಮಾಲಯ ಪರ್ವತಗಳಲ್ಲಿ ತಾಪಮಾನ ಏರಿಕೆಯಿಂದ, ಪರಿಸರ ವ್ಯವಸ್ಥೆಯಲ್ಲಿ ಗಣನೀಯ ಬದಲಾವಣೆಗಳಾಗಿವೆ’ ಎಂದು ಸಂಶೋಧನಾ ತಂಡ ಮುಖ್ಯಸ್ಥ ಪೋಟ್ಸ್‌ಮೌತ್‌ ವಿಶ್ವವಿದ್ಯಾಲಯದ ನಿಕ್‌ ಪೆಪಿನ್‌ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಉತ್ತರಾಂಚಲ ಮತ್ತು ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಸಂಶೋಧಕರೂ ಈ ತಂಡದಲ್ಲಿದ್ದಾರೆ. ಸಂಶೋಧಕರು ವಿಶ್ವದ ಚಾವಣಿ ಎಂದೇ ಹೆಸರಾದ ಟಿಬೆಟಿಯನ್‌ ಪ್ರಸ್ಥಭೂಮಿ, ಆಲ್ಪ್ ಮತ್ತು ಏಷ್ಯಾದ ಎತ್ತರ ಪ್ರದೇಶಗಳಲ್ಲಿ ಸಂಶೋಧನೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.