ADVERTISEMENT

ಠಾಣೆ: ₹31.8 ಕೋಟಿಯ ಮೆಫೆಡ್ರೋನ್ ವಶ; ಇಬ್ಬರ ಬಂಧನ

ಪಿಟಿಐ
Published 12 ಆಗಸ್ಟ್ 2025, 15:29 IST
Last Updated 12 ಆಗಸ್ಟ್ 2025, 15:29 IST
   

ಠಾಣೆ: ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಹೆದ್ದಾರಿಯೊಂದರಲ್ಲಿ ಎರಡು ಕಾರುಗಳಲ್ಲಿ ಸಾಗಿಸುತ್ತಿದ್ದ ₹31.8 ಕೋಟಿ ಮೌಲ್ಯದ 15 ಕೆ.ಜಿ.ಗೂ ಹೆಚ್ಚು ಮೆಫೆಡ್ರೋನ್ (ಮಾದಕ ವಸ್ತು) ಅನ್ನು ಪೊಲೀಸರು ವಶಪಡಿಸಿ‌ಕೊಂಡಿದ್ದಾರೆ. ಘಟನೆಯಲ್ಲಿ ಅಪರಾಧ ಹಿನ್ನಲೆ ಇರುವ ಇಬ್ಬರನ್ನು ಬಂಧಿಸಲಾಗಿದೆ ಎಂ‌ದು ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.

ಮುಂಬ್ರಾ ನಿವಾಸಿ ತನ್ವೀರ್ ಅಹ್ಮದ್ ಕಮರ್ ಅಹ್ಮದ್ ಅನ್ಸಾರಿ (23), ವಿಠಲವಾಡಿ ನಿವಾಸಿ ಮಹೇಶ್ ಹಿಂದೂರಾವ್ ದೇಸಾಯಿ (35) ಬಂಧಿತರು.

ನಿಷೇಧಿತ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಸುಳಿವಿನ ಮೇರೆಗೆ, ಆಗಸ್ಟ್ 9ರಂದು ರಂಜನೋಲಿ ಬಳಿಯ ನಾಸಿಕ್-ಠಾಣೆ ಹೆದ್ದಾರಿಯಲ್ಲಿ ಪೊಲೀಸ್ ತಂಡ ಎರಡು ಕಾರುಗಳನ್ನು ತಡೆದಿತ್ತು ಎಂದು ಡಿಸಿಪಿ (ಅಪರಾಧ) ಅಮರ್‌ಸಿಂಗ್ ಜಾಧವ್ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.