ADVERTISEMENT

ನಟಿ ಮಾಯಾ ಕೃಷ್ಣನ್ ವಿರುದ್ಧ #MeToo ಆರೋಪ

ರಂಗಭೂಮಿ ನಟಿ ಅನನ್ಯಾ ರಾಮ್‌ಪ್ರಸಾದ್ ಆರೋಪ

ಪಿಟಿಐ
Published 1 ನವೆಂಬರ್ 2018, 14:15 IST
Last Updated 1 ನವೆಂಬರ್ 2018, 14:15 IST
ಮಾಯಾ ಕೃಷ್ಣನ್, ಅನನ್ಯ ರಾಮ್‌ಪ್ರಸಾದ್
ಮಾಯಾ ಕೃಷ್ಣನ್, ಅನನ್ಯ ರಾಮ್‌ಪ್ರಸಾದ್   

ಚೆನ್ನೈ: ರಜನೀಕಾಂತ್ ಮುಖ್ಯಭೂಮಿಕೆಯ 2.0 ಚಿತ್ರದಲ್ಲಿ ಅಭಿನಯಿಸಿರುವ ನಟಿ ಮಾಯಾ ಎಸ್.ಕೃಷ್ಣನ್ ವಿರುದ್ಧ ರಂಗಭೂಮಿ ನಟಿ ಅನನ್ಯ ರಾಮ್‌ಪ್ರಸಾದ್ ಅವರು #MeToo ಆರೋಪ ಮಾಡಿದ್ದಾರೆ.

‘ನಾನು ಲೈಂಗಿಕ ಕಿರುಕುಳದ ಸಂತ್ರಸ್ತೆ. ಮಾಯಾ ಅವರಿಂದ ಮಾನಸಿಕವಾಗಿ, ಭಾವನಾತ್ಮಕವಾಗಿ ನಿಂದನೆಗೊಳಗಾಗಿದ್ದೇನೆ’ ಎಂದು ಅನನ್ಯ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಆರೋಪಗಳನ್ನು ಮಾಯಾ ತಳ್ಳಿಹಾಕಿದ್ದಾರೆ. ಕಾನೂನು ಸಮರ ಎದುರಿಸಲು ಸಜ್ಜಾಗಿರುವುದಾಗಿ ತಿಳಿಸಿದ್ದಾರೆ.‘ಅನನ್ಯಾ ಆರೋಪಿಸಿರುವಂತೆ ನಾನು ಯಾವುದೇ ತಪ್ಪು ಮಾಡಿಲ್ಲ. ಅವಳನ್ನು ಮಗುವಿನಂತವಳು ಎಂದುಕೊಂಡಿದ್ದೇ ನಾನು ಮಾಡಿದ ತಪ್ಪು, ಇನ್ನು ಹಾಗೆ ಮಾಡುವುದಿಲ್ಲ’ ಎಂದು ಮಾಯಾ ಸ್ಪಷ್ಟನೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.