ADVERTISEMENT

ಮೆಟ್ರೊ: ಲಗೇಜ್ ತೂಕ ಮಿತಿ 25 ಕೆ.ಜಿ. ಹೆಚ್ಚಳ

ಪಿಟಿಐ
Published 29 ಆಗಸ್ಟ್ 2019, 19:37 IST
Last Updated 29 ಆಗಸ್ಟ್ 2019, 19:37 IST
Metro Train trial run at the National College Road Metro station to Puttenahalli Metro station, in Bangalore on Sunday.-Photo/ Kotekar
Metro Train trial run at the National College Road Metro station to Puttenahalli Metro station, in Bangalore on Sunday.-Photo/ Kotekar   

ನವದೆಹಲಿ: ದೇಶದ ಮೆಟ್ರೊ ರೈಲು ಪ್ರಯಾಣಿಕರು ಇನ್ನು ಮುಂದೆ ಭಾರಿ ತೂಕದ ಲಗೇಜ್‌ ಒಯ್ಯಲು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಅನುಮತಿ ನೀಡಿದೆ.

ಪ್ರಸ್ತುತ ಮೆಟ್ರೊದಲ್ಲಿ ಲಗೇಜ್ ಕೊಂಡೊಯ್ಯಲು ಇದ್ದ 15 ಕೆ.ಜಿ. ತೂಕದ ಮಿತಿಯನ್ನು 25 ಕೆ.ಜಿಗೆ ಹೆಚ್ಚಿಸಲಾಗಿದೆ. ಆದರೆ ಮೆಟ್ರೊ ರೈಲು ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕು.

80x50x30 ಸೆಂ.ಮೀ. ಗಾತ್ರದ, 25 ಕೆ.ಜಿ. ತೂಕದ ಒಂದು ಬ್ಯಾಗ್‌ಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಪ್ರತ್ಯೇಕವಾಗಿ ಇಷ್ಟು ತೂಕದ ಲಗೇಜ್ ಒಯ್ಯುವಂತಿಲ್ಲ. ವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಮೆಟ್ರೊ ರೈಲುಗಳಲ್ಲಿ ಮಾತ್ರ ತೂಕದ ಮಿತಿಯನ್ನು 32 ಕೆ.ಜಿ.ಗೆ ಹೆಚ್ಚಿಸಲಾಗಿದೆ. ಆದರೆ ಇಲ್ಲಿ ಸಹ ಬಿಡಿಬಿಡಿಯಾಗಿ ಇಷ್ಟು ತೂಕದ ಲಗೇಜ್ ಕೊಂಡೊಯ್ಯಲು ಅನುಮತಿ ಇಲ್ಲ.

ADVERTISEMENT

ಮೆಟ್ರೊ ರೈಲು (ಲಗೇಜ್ ಮತ್ತು ಟಿಕೆಟ್) ನಿಯಮ 2014ಕ್ಕೆ ತಿದ್ದುಪಡಿ ತಂದಿರುವ ಸರ್ಕಾರ, ಈ ಕುರಿತು ಮಂಗಳವಾರ ಅಧಿಸೂಚನೆ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.