ADVERTISEMENT

ಪ್ರಧಾನಿ ಮೋದಿ ತಾಯಿ ಸ್ಮರಣಾರ್ಥ ‘ಮಾ’ ಮೈಕ್ರೊಸೈಟ್‌ ಆರಂಭ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 13:40 IST
Last Updated 11 ಮಾರ್ಚ್ 2023, 13:40 IST
ತಾಯಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ತಾಯಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ಅವರ ತಾಯಿ ಹೀರಾಬೆನ್ ಮೋದಿ ಸ್ಮರಣಾರ್ಥ ‘ಮಾ’ ಎಂಬ ಮೈಕ್ರೊಸೈಟ್‌ (ವೆಬ್‌ ಪೇಜ್‌) ಆರಂಭಿಸಲಾಗಿದೆ.

‘ಹೀರಾಬೆನ್ ಅವರ ಸ್ಮರಣಾರ್ಥ ‘ಮಾ’ ಮೈಕ್ರೊಸೈಟ್‌ ಆರಂಭಿಸಲಾಗಿದೆ. ಜಗತ್ತಿನಾದ್ಯಂತ ಮಾ.8ರಂದು ಮಹಿಳಾ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ತಾಯಿಗೆ ಗೌರವ ಸೂಚಕವಾಗಿ ಇದನ್ನು ಆರಂಭಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಮತ್ತು ಅವರ ತಾಯಿ ನಡುವಿನ ಪ್ರೀತಿ ಬಾಂಧವ್ಯವನ್ನು ಸೆರೆಹಿಡಿದ ಫೋಟೊ ಮತ್ತು ವಿಡಿಯೊಗಳನ್ನು ವೈಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಹೀರಾಬೆನ್ ಅವರು ಮಕ್ಕಳಿಗೆ ಹೇಳಿದ ನೀತಿಪಾಠಗಳು, ತಾಯಿಗೆ 100 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಮೋದಿ ಅವರು ಬರೆದ ಲೇಖನವನ್ನು ಪ್ರಕಟಿಸಲಾಗಿದೆ.

ADVERTISEMENT

ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರು ಕಳೆದ ವರ್ಷ ಡಿ.30ರಂದು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.