ಭೋಪಾಲ್: ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ3.3 ತೀವ್ರತೆಷ್ಟು ಭೂಮಿ ಕಂಪಿಸಿದ್ದು, ಇಲ್ಲಿಂದ 96 ಕಿ.ಮೀ ದೂರವಿರುವ ಮಹಾರಾಷ್ಟ್ರದ ನಾಗಪುರದಲ್ಲೂ ಭೂಕಂಪನದ ಅನುಭವಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.
‘ಸಿಯೋನಿಯಲ್ಲಿ ಮಂಗಳವಾರ ಬೆಳಿಗ್ಗೆ 4.10 ಕ್ಕೆ ಭೂಮಿ ಕಂಪಿಸಿದ್ದು, 15 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. ಯಾವುದೇ ಪ್ರಾಣ ಮತ್ತು ಆಸ್ತಿ ಹಾನಿ ವರದಿಯಾಗಿಲ್ಲ’ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಭೋಪಾಲ್ ಕೇಂದ್ರದ ವಿಜ್ಞಾನಿ ವೇದ ಪ್ರಕಾಶ್ ಸಿಂಗ್ ಅವರು ಮಾಹಿತಿ ನೀಡಿದ್ಧಾರೆ.
‘ದುಂಡಾ ಸಿಯೋನಿ ಉಪನಗರ ಮತ್ತು ಜಿಲ್ಲೆಯ ಇತರ ಭಾಗಗಳ ಕೆಲವು ನಿವಾಸಿಗಳಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಆ ಸಮಯದಲ್ಲಿ ಗಾಬರಿಯಿಂದ ಮನೆ ಹೊರಕ್ಕೆ ಬಂದಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.