ADVERTISEMENT

ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಅಕ್ಟೋಬರ್ 2022, 9:21 IST
Last Updated 21 ಅಕ್ಟೋಬರ್ 2022, 9:21 IST
ಕೇಂದ್ರ ಸಚಿವ ಕಿರಣ್ ರಿಜಿಜು ಟ್ವಿಟರ್ ಖಾತೆಯ ಚಿತ್ರ
ಕೇಂದ್ರ ಸಚಿವ ಕಿರಣ್ ರಿಜಿಜು ಟ್ವಿಟರ್ ಖಾತೆಯ ಚಿತ್ರ   

ಇಟಾನಗರ: ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯ ಟುಟಿಂಗ್ ಪಟ್ಟಣದ ಸಮೀಪ ಬೆಳಿಗ್ಗೆ 10.43ರ ಸುಮಾರಿಗೆ ವಾಯುಪಡೆಯ ಅತ್ಯಾಧುನಿಕ ಲಘು ಹೆಲಿಕಾಪ್ಟರ್(ಎಎಲ್‌ಎಚ್) ಪತನಗೊಂಡಿದೆ.

ಐವರು ಸೇನಾ ಅಧಿಕಾರಿಗಳನ್ನೊಳಗೊಂಡ ಹೆಲಿಕಾಪ್ಟರ್, ಸಿಯಾಂಗ್ ಜಿಲ್ಲೆಯ ಕೆಳಪ್ರದೇಶದ ಲಿಕಬಾಲಿಯಿಂದ ಟೇಕಾಫ್ ಆಗಿತ್ತು. ದಿನನಿತ್ಯದ ಕಣ್ಗಾವಲಿಗಾಗಿ ಹೆಲಿಕಾಪ್ಟರ್ ಹೊರಟಿತ್ತು. ಆದರೆ, ಟುಟಿಂಗ್‌ನಿಂದ 25 ಕಿ.ಮೀ ದೂರದ ಮಿಗ್ಗಿಂಗ್ ಬಳಿ ಹೆಲಿಕಾಪ್ಟರ್ ಪತನಗೊಂಡಿದೆ.

ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, ಸೇನೆಯ ಇತರೆ ಹೆಲಿಕಾಪ್ಟರ್‌ಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

ADVERTISEMENT

ರಸ್ತೆ ಸಂಪರ್ಕವಿಲ್ಲದ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ದುರ್ಗಮ ಪ್ರದೇಶವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೆರಳಿರುವ ಸೇನೆಯ ಮತ್ತೊಂದು ಹೆಲಿಕಾಪ್ಟರ್ ಅಲ್ಲಿ ಇಳಿದಿಲ್ಲ. ಸ್ಥಳೀಯ ಜನರಿಂದ ಸಹಾಯ ಕೋರಲಾಗಿದೆ.

ಅರುಣಾಚಲಪ್ರದೇಶವು ಚೀನಾ ಮತ್ತು ಮ್ಯಾನ್ಮಾರ್ ಜೊತೆ ಗಡಿ ಹಂಚಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.