ADVERTISEMENT

ಕೊರೊನಾ ವಿರುದ್ಧದ ಹೋರಾಟಕ್ಕೆ ಬೆಂಬಲ: ಪ್ರಧಾನಿ ಕರೆಗೆ ಓಗೊಟ್ಟು ದೀಪ ಬೆಳಗಿದ ಜನತೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 16:22 IST
Last Updated 5 ಏಪ್ರಿಲ್ 2020, 16:22 IST
ದೀಪ ಬೆಳಗಿದ ಮುಖ್ತಾರ್ ಅಬ್ಬಾಸ್ ನಖ್ವಿ
ದೀಪ ಬೆಳಗಿದ ಮುಖ್ತಾರ್ ಅಬ್ಬಾಸ್ ನಖ್ವಿ   

ನವದೆಹಲಿ:ಪ್ರಧಾನಿ ನರೇಂದ್ರ ಮೋದಿಕರೆಗೆ ಓಗೊಟ್ಟು ದೇಶದ ಜನತೆ 9 ಗಂಟೆಗೆ 9 ನಿಮಿಷ ದೀಪ ಹಚ್ಚಿ ಕೊರೊನಾ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಮನೆಯ ವಿದ್ಯುತ್ ದೀಪಗಳನ್ನು ಸ್ವಿಚ್ ಆಫ್ ಮಾಡಿ ಮೊಂಬತ್ತಿ, ದೀಪಗಳನ್ನು ಬೆಳಗುವುದರ ಜತೆಗೆ ಜನರು ಪಟಾಕಿ ಸಿಡಿಸಿ, ಶಂಖ, ಗಂಟೆಬಾರಿಸಿ ಸಂಭ್ರಮಿಸಿದ್ದಾರೆ.

ಟ್ವಿಟರ್‌ನಲ್ಲಿ #9बजे9मिनट #9baje9mintues #9MinutesForIndia #9baje9minute ಎಂಬ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗಿದ್ದು ಖ್ಯಾತ ಕ್ರಿಕೆಟಿಗರು, ಸಿನಿಮಾ ನಟರು ಮತ್ತು ಗಣ್ಯರು ದೀಪ ಹಚ್ಚುತ್ತಿರುವ ಫೋಟೊಗಳನ್ನು ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT