ADVERTISEMENT

ಸರ್ಕಾರಿ ಕಚೇರಿಗಳಲ್ಲಿ 8.72 ಲಕ್ಷ ಹುದ್ದೆಗಳು ಖಾಲಿ: ಕೇಂದ್ರ

ಪಿಟಿಐ
Published 3 ಫೆಬ್ರುವರಿ 2022, 10:21 IST
Last Updated 3 ಫೆಬ್ರುವರಿ 2022, 10:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಮಾರ್ಚ್‌ 1, 2020ರಿಂದ ಸುಮಾರು 8.72 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ರಾಜ್ಯ ಸಭೆ ಗುರುವಾರ ಮಾಹಿತಿ ನೀಡಿದೆ.

ಮಾರ್ಚ್‌ 1, 2018ರಿಂದ 6,83,823 ಹುದ್ದೆಗಳು,ಮಾರ್ಚ್‌ 1, 2019ರಿಂದ 9,10,153 ಹುದ್ದೆಗಳು ಖಾಲಿಯಿದ್ದವು ಎಂದು ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಮಾರ್ಚ್‌ 1, 2020ರಿಂದ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ 8,72,243 ಹುದ್ದೆಗಳು ಖಾಲಿ ಇರುವುದಾಗಿ ಉತ್ತರಿಸಿದ್ದಾರೆ.

ADVERTISEMENT

ಮೂರು ಪ್ರಮುಖ ನೇಮಕಾತಿ ಏಜೆನ್ಸಿಗಳಾದ -ಸಿಬ್ಬಂದಿ ನೇಮಕ ಆಯೋಗ(ಎಸ್ಎಸ್‌ಸಿ), ಕೇಂದ್ರೀಯ ಲೋಕಸೇವಾ ಆಯೋಗ(ಯುಪಿಎಸ್‌ಸಿ) ಮತ್ತು ರೈಲ್ವೆ ನೇಮಕಾತಿ ಆಯೋಗ(ಆರ್‌ಆರ್‌ಬಿಎಸ್‌) 2018-19 ಮತ್ತು 2020-21ನೇ ಸಾಲಿನಲ್ಲಿ 2,65,468 ಮಂದಿಯನ್ನು ನೇಮಕ ಮಾಡಿಕೊಂಡಿವೆ ಎಂದು ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.