ADVERTISEMENT

ಮಿಯಾ ಮುಸ್ಲಿಮರನ್ನಷ್ಟೇ ಹೊರಹಾಕುತ್ತಿದ್ದೇವೆ: ಹಿಮಂತ ಬಿಸ್ವ ಶರ್ಮ 

ಒತ್ತುವರಿ ಭೂಮಿ ತೆರವು ಕಾರ್ಯಾಚರಣೆ ಅಸ್ಸಾಂ ಸಿ.ಎಂ.ಹಿಮಂತ ಬಿಸ್ವ ಶರ್ಮ 

ಪಿಟಿಐ
Published 11 ಆಗಸ್ಟ್ 2025, 16:12 IST
Last Updated 11 ಆಗಸ್ಟ್ 2025, 16:12 IST
ಹಿಮಂತ ಬಿಸ್ವ ಶರ್ಮ
ಹಿಮಂತ ಬಿಸ್ವ ಶರ್ಮ   

ಗುವಾಹಟಿ: ಒತ್ತುವರಿ ಭೂಮಿ ತೆರವು ಕಾರ್ಯಾಚರಣೆ ಹೆಸರಿನಲ್ಲಿ ಅಸ್ಸಾಂ ಸರ್ಕಾರವು ಮುಸ್ಲಿಂ ಸಮುದಾಯಗಳನ್ನು ಗುರಿಯಾಗಿಸುತ್ತಿದೆ ಎಂಬ ಆರೋಪಗಳ ನಡುವೆಯೇ ‘ನಾವು ಮಿಯಾ ಮುಸ್ಲಿಮರನ್ನು ಮಾತ್ರ ಹೊರಹಾಕುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.

ಸರ್ಕಾರ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡಿದೆ ಎಂದು ಪ್ರತಿಪಕ್ಷಗಳು ಆರೋಪಿಸಿರುವುದರ ಬಗ್ಗೆ ಸಿ.ಎಂ. ಶರ್ಮ ಪ್ರತಿಕ್ರಿಯಿಸಿದ್ದಾರೆ. 

‘ಅರಣ್ಯ ಪ್ರದೇಶ, ಜೌಗು ಪ್ರದೇಶಗಳನ್ನು ಮಿಯಾ ಮುಸ್ಲಿಮರು ಅತಿಕ್ರಮಿಸಿಕೊಂಡಿರುವ ಕಾರಣ ಅವರನ್ನು ಅಲ್ಲಿಂದ ಹೊರಹಾಕಲಾಗುತ್ತಿದೆ. ನದಿಪಾತ್ರದ ಪ‍್ರದೇಶಗಳಲ್ಲಿ ಅವರಿಗೆ ಸೌಲಭ್ಯವಿದ್ದರೂ ಅವರೇಕೆ ಅರಣ್ಯ ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದ್ದಾರೆ? ಶಿವಸಾಗರ್‌, ಜೋರ್ಹತ್‌ನಂಥ ಜಿಲ್ಲೆಗಳನ್ನೂ ಮಿಯಾ ಮುಸ್ಲಿಮರು ಅತಿಕ್ರಮಿಸಿಕೊಳ್ಳುತ್ತಿದ್ದು, ಅಸ್ಸಾಮಿಗಳು ಬದುಕುಳಿಯುವುದಾದರೂ ಹೇಗೆ’ ಎಂದು ಶರ್ಮ ಪ್ರಶ್ನಿಸಿದ್ದಾರೆ.

ADVERTISEMENT

ಜತೆಗೆ ಪ್ರತಿಭಟನೆಗಳ ನಡುವೆಯೇ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದೂ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.