ADVERTISEMENT

ಮಿಜೋರಾಂನಲ್ಲಿ ಶಿಕ್ಷಣ ಸಂಸ್ಥೆಗಳ ಪುನರಾರಂಭ ಸದ್ಯಕ್ಕಿಲ್ಲ

ಪಿಟಿಐ
Published 4 ಜುಲೈ 2020, 6:33 IST
Last Updated 4 ಜುಲೈ 2020, 6:33 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಅಜ್ವಾಲ್‌: ಕೊರೊನಾ ಸೋಂಕು ಹರಡುವುದನ್ನು ತಡೆಯುವ ಕ್ರಮವಾಗಿ ಮಿಜೋರಾಂ ಸರ್ಕಾರ 2020–21ನೇ ಶೈಕ್ಷಣಿಕ ಸಾಲಿಗೆ ಶಾಲೆಗಳ ಪುನರಾರಂಭವನ್ನು ಜುಲೈ ಅಂತ್ಯದವರೆಗೂ ಮುಂದೂಡಿದೆ.

‘ಇದೇ 15ರಿಂದ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ನಿರ್ಧರಿಸಲಾಗಿತ್ತು. ಆದರೆ ನಿತ್ಯವೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕೇಂದ್ರವು ಸಂಸ್ಥೆಗಳನ್ನು ತೆರೆಯದಿರಲು ಸೂಚಿಸಿದೆ. ಹೀಗಾಗಿ, ಜು.31ವರೆಗೆ ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದಿಲ್ಲ' ಎಂದು ಮಿಜೋರಾಂ ಶಿಕ್ಷಣ ಸಚಿವಲಾಲ್ಚಂಡಮಾ ರಾಲ್ಟೆ ತಿಳಿಸಿದರು.

ಸದ್ಯ, ರಾಜ್ಯದಲ್ಲಿ 162 ಮಂದಿಗೆ ಸೋಂಕು ತಗುಲಿದ್ದು, 35 ಪ್ರಕರಣಗಳು ಸಕ್ರಿಯವಾಗಿವೆ. 127 ಮಂದಿ ಗುಣಮುಖರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.