ADVERTISEMENT

ಡ್ಯಾನ್ಸ್‌ ಬಾರ್‌ ಮೇಲೆ ಎಂಎನ್‌ಎಸ್ ಕಾರ್ಯಕರ್ತರ ದಾಳಿ

ಪಿಟಿಐ
Published 3 ಆಗಸ್ಟ್ 2025, 7:42 IST
Last Updated 3 ಆಗಸ್ಟ್ 2025, 7:42 IST
<div class="paragraphs"><p> ಬಾರ್‌ </p></div>

ಬಾರ್‌

   

ಠಾಣೆ: ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್) ಕಾರ್ಯಕರ್ತರು ಡ್ಯಾನ್ಸ್‌ ಬಾರ್‌ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಶನಿವಾರ ತಡರಾತ್ರಿ ಪನ್ವೆಲ್ ಹೊರವಲಯದ ‘ನೈಟ್ ರೈಡರ್ಸ್ ಬಾರ್‌‘ನಲ್ಲಿ ಈ ಘಟನೆ ನಡೆದಿದೆ. ಎಂಎನ್‌ಎಸ್ ಕಾರ್ಯಕರ್ತರ ಗುಂಪು ಬಾರ್‌ ಒಳಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಮದ್ಯದ ಬಾಟಲಿಗಳನ್ನು ಒಡೆದುಹಾಕಿ ಭಾರೀ ಹಾನಿ ಉಂಟುಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ADVERTISEMENT

ಈ ದಾಳಿಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮುರಿದ ಟೇಬಲ್‌, ಕುರ್ಚಿಗಳು, ಪುಡಿ ಪುಡಿಯಾದ ಕಿಟಕಿ ಗಾಜುಗಳನ್ನು ವಿಡಿಯೊದಲ್ಲಿ ಕಾಣಬಹುದು.

ಛತ್ರಪತಿ ಶಿವಾಜಿ ಮಹಾರಾಜರ ಪವಿತ್ರ ಭೂಮಿಯಲ್ಲಿ ಡ್ಯಾನ್ಸ್‌ ಬಾರ್‌ಗಳಿಗೆ ಸ್ಥಾನವಿಲ್ಲ. ಇಂತಹ ಅಶ್ಲೀಲತೆಯನ್ನು ನಾವು ರಾಜ್ಯದ ಯಾವುದೇ ಭಾಗದಲ್ಲಿಯೂ ಸಹಿಸುವುದಿಲ್ಲ ಎಂದು ಎಂಎನ್‌ಎಸ್‌ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ಈ ಘಟನೆ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.