ADVERTISEMENT

ಮತಾಂತರ ಆರೋಪ: ಛತ್ತೀಸಗಡದಲ್ಲಿ ಪಾದ್ರಿ ಮೇಲೆ ನೂರಾರು ಜನರಿಂದ ಹಲ್ಲೆ

ಪಿಟಿಐ
Published 30 ಆಗಸ್ಟ್ 2021, 1:15 IST
Last Updated 30 ಆಗಸ್ಟ್ 2021, 1:15 IST
ಸಾಂದರ್ಭಿಕ ಚಿತ್ರ (ಐಸ್ಟಾಕ್)
ಸಾಂದರ್ಭಿಕ ಚಿತ್ರ (ಐಸ್ಟಾಕ್)   

ರಾಯ್‌ಪುರ: ಮತಾಂತರ ಮಾಡುತ್ತಿದ್ದ ಆರೋಪದಲ್ಲಿ ಛತ್ತೀಸಗಡದ ಕಬೀರ್‌ಧಾಮ್ ಜಿಲ್ಲೆಯ ಕುಗ್ರಾಮವೊಂದರಲ್ಲಿ ಕ್ರೈಸ್ತ ಪಾದ್ರಿಯೊಬ್ಬರನ್ನು ಅವರ ಮನೆಯಲ್ಲೇ ಸುಮಾರು 100 ಮಂದಿ ಥಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಉದ್ರಿಕ್ತ ಜನರ ಗುಂಪು ಪಾದ್ರಿ ಅವರ ಮನೆ, ಆಸ್ತಿಗೆ ಹಾನಿ ಮಾಡಿದ್ದಲ್ಲದೆ, ಕುಟುಂಬ ಸದಸ್ಯರನ್ನೂ ನಿಂದಿಸಿತ್ತು. ಹಲ್ಲೆಕೋರರು ‘ಮತಾಂತರ ಮಾಡುವುದನ್ನು ನಿಲ್ಲಿಸಿ’ ಎಂಬ ಘೋಷಣೆಗಳನ್ನೂ ಕೂಗುತ್ತಿದ್ದರು.

ಪೊಲ್ಮಿ ಗ್ರಾಮದ ಕುದ್ಕುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪಾದ್ರಿಯ ಮನೆಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದಾಗ ಭಾನುವಾರ ಬೆಳಿಗ್ಗೆ 11 ಗಂಟೆ ವೇಳೆಗೆ ಘಟನೆ ನಡೆದಿದೆ ಎಂದು ಕಬೀರ್‌ಧಾಮ್ ಎಸ್‌ಪಿ ಮೋಹಿತ್ ಗಾರ್ಗ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.