ADVERTISEMENT

ಪ್ರಧಾನಿ ಮೋದಿ ಆದಾಯ ನಾಲ್ಕು ವರ್ಷಗಳಲ್ಲಿ ಶೇ.52ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 12:32 IST
Last Updated 26 ಏಪ್ರಿಲ್ 2019, 12:32 IST
ಪ್ರಧಾನಿ ನರೇಂದ್ರ ಮೋದಿ 
ಪ್ರಧಾನಿ ನರೇಂದ್ರ ಮೋದಿ    

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಆಸ್ತಿ ಐದು ವರ್ಷಗಳಲ್ಲಿ ಶೇ.52 ರಷ್ಟು ಹೆಚ್ಚಳವಾಗಿದೆ.

2019ರ ಚುನಾವಣೆಯಲ್ಲಿ ವಾರಾಣಸಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿಶುಕ್ರವಾರ ನರೇಂದ್ರ ಮೋದಿ ನಾಮಪತ್ರ ಸಲ್ಲಿಸಿದ್ದು ಈ ಸಂದರ್ಭದಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿಆಸ್ತಿ ಘೋಷಿಸಿದ್ದಾರೆ. 2014ರಿಂದ 2019ರವರೆಗೆ ಈ ಹೆಚ್ಚಳ ಕಂಡುಬಂದಿದೆ. ಈ ಹೆಚ್ಚಳ ಕಂಡುಬಂದಿರುವುದು ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇರಿಸಿರುವ ₹ 1.27 ಕೋಟಿ ನಿಶ್ಚಿತ ಠೇವಣಿ (ಫಿಕ್ಸೆಡ್ ಡಿಪಾಸಿಟ್)ಯಲ್ಲಿ ಎಂದು ತಿಳಿಸಲಾಗಿದೆ.

ಪ್ರಮಾಣಪತ್ರದಲ್ಲಿ ಒಟ್ಟು ಆಸ್ತಿಯ ಮೊತ್ತ ₹ 2.51 ಕೋಟಿಯಾಗಿದ್ದು, ಇದರಲ್ಲಿ ಸ್ಥಿರಾಸ್ತಿ ಮೊತ್ತ ₹ 1.10 ಕೋಟಿ ಹಾಗೂಬ್ಯಾಂಕು, ಇತರೆ ಹೂಡಿಕೆ ಸೇರಿ ಒಟ್ಟು ಮೊತ್ತ ₹ 1,41,36,119 ಎಂದು ತಿಳಿಸಲಾಗಿದೆ.

ADVERTISEMENT

ನಗದು ಹಣದಲ್ಲಿ 2014ರಲ್ಲಿ ಇದ್ದ ಮೊತ್ತಕ್ಕೂ 2019ರಲ್ಲಿ ಇರುವ ಮೊತ್ತಕ್ಕೂ ಶೇ.114.15ರಷ್ಟು ಹೆಚ್ಚಳ ಕಂಡು ಬಂದಿದೆ. 2014ರಲ್ಲಿ ಮೊದಲ ಬಾರಿಗೆ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ವೇಳೆ ನಗದು ಮೊತ್ತ ₹ 65,91,582 ಇತ್ತು. ಮೋದಿ ಪಡೆಯುತ್ತಿರುವ ಸರ್ಕಾರಿ ಸಂಬಳ ಹಾಗೂ ಉಳಿತಾಯದ ಮೇಲಿನ ಬಡ್ಡಿಯೇ ಆದಾಯದ ಮೂಲ ಎನ್ನಲಾಗಿದೆ.ಪ್ರಮಾಣಪತ್ರದಲ್ಲಿ ಮೋದಿ ತಾನು ಯಾವುದೇ ಕ್ರಿಮಿನಲ್ ಆರೋಪವಾಗಲಿ, ವಿಚಾರಣೆಯನ್ನಾಗಲಿ ಎದುರಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಆಸ್ತಿಘೋಷಣೆ ಪ್ರಮಾಣ ಪತ್ರದಲ್ಲಿ ಮೂರು ವಿಭಾಗಗಳಿದ್ದು, ಅವುಗಳೆಂದರೆ, ಸ್ಥಿರಾಸ್ತಿ, ಚರಾಸ್ತಿ ಮತ್ತು ಹೊಣೆಗಾರಿಕೆಗಳು ಎಂದು ವರ್ಗೀಕರಿಸಲಾಗಿದೆ.

ಪ್ರಮಾಣ ಪತ್ರದ ಪ್ರಕಾರನರೇಂದ್ರ ಮೋದಿ ಚರಾಸ್ತಿಯಲ್ಲಿಮಾ.31, 2019ರ ವೇಳೆಗೆ ₹38,750 ಕೈಯಲ್ಲಿರುವ ನಗದು, ಬ್ಯಾಂಕ್ ಬ್ಯಾಲೆನ್ಸ್ ₹ 4,143, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್)ಹಣ ₹ 1,27,81,574 ( ₹1.27 ಕೋಟಿ ).ಸ್ಥಿರಾಸ್ತಿಯಲ್ಲಿ ₹ 1,10 ಕೋಟಿ ಬೆಲೆಬಾಳುವ ಮನೆ ಇದೆ ಎಂದುತಿಳಿಸಿದ್ದಾರೆ. 2014ರಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಮೋದಿ ಕೈಯಲ್ಲಿದ್ದ ಹಣ ₹ 32,700. ಬ್ಯಾಂಕ್ ಬ್ಯಾಲೆನ್ಸ್ ₹ 26.05 ಲಕ್ಷಗಳಾಗಿದ್ದವು. ಅಂದು ಫಿಕ್ಸೆಡ್ ಡಿಪಾಸಿಟ್ ₹ 32.48 ಲಕ್ಷ ಎಂದು ಹೇಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.