
ಎಚ್.ಡಿ.ದೇವೇಗೌಡ–ಪ್ರಧಾನಿ ಮೋದಿ
ನವದೆಹಲಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುವಾರ ಇಲ್ಲಿ ಭೇಟಿ ಮಾಡಿ ಸಮಾಲೋಚಿಸಿದರು.
‘ದೇವೇಗೌಡ ಅವರೊಂದಿಗೆ ಸಂವಾದ ನಡೆಸಲಾಯಿತು. ಪ್ರಮುಖ ವಿಷಯಗಳ ಕುರಿತು ಅವರ ಅರ್ಥಪೂರ್ಣ ವಿಚಾರಗಳು ಗಮನಾರ್ಹವಾಗಿವೆ. ಭಾರತದ ಅಭಿವೃದ್ಧಿಯ ಬಗ್ಗೆ ಅವರಿಗಿರುವ ಉತ್ಸಾಹವು ಅಷ್ಟೇ ಪ್ರಶಂಸನೀಯವಾಗಿದೆ’ ಎಂದು ಮೋದಿ ‘ಎಕ್ಸ್’ ಮಾಡಿದ್ದಾರೆ.
‘ಮೋದಿ ಜತೆಗಿನ ಚರ್ಚೆ ಆತ್ಮೀಯವಾಗಿತ್ತು. ನಾನು ಹಂಚಿಕೊಂಡ ಅಭಿವೃದ್ಧಿ ವಿಚಾರಗಳನ್ನು ತಾಳ್ಮೆಯಿಂದ ಆಲಿಸಿದರು. ಈ ನಡೆಯು ಅವರ ಕಾಳಜಿ, ತಿಳಿವಳಿಕೆ ಹಾಗೂ ವಿನಮ್ರತೆಯ ಪ್ರತಿಬಿಂಬ’ ಎಂದು ದೇವೇಗೌಡ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.