ADVERTISEMENT

ಬಹುಸಂಖ್ಯಾತರಿಗೆ ಅಷ್ಟೇ ಯಾಕೆ ಬೆಂಬಲ: ಮೋದಿಗೆ ಚಿದಂಬರಂ ಪ್ರಶ್ನೆ

ಪಿಟಿಐ
Published 21 ಅಕ್ಟೋಬರ್ 2021, 10:26 IST
Last Updated 21 ಅಕ್ಟೋಬರ್ 2021, 10:26 IST
ಪಿ.ಚಿದಂಬರಂ
ಪಿ.ಚಿದಂಬರಂ   

ನವದೆಹಲಿ: ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾಗತಿಕ ಮಟ್ಟದಲ್ಲಿ ಬಹುತ್ವವನ್ನು ಒಪ್ಪಿಕೊಂಡಿದೆ. ಆದರೆ, ಭಾರತದಲ್ಲಿ ಬಹುಸಂಖ್ಯಾತರನ್ನು ಮಾತ್ರ ಬೆಂಬಲಿಸುತ್ತಿದೆ‘ ಎಂದು ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕ್ವಾಡ್‌ ಸಂಘಟನೆಯಲ್ಲಿರುವ ಸದಸ್ಯ ರಾಷ್ಟ್ರಗಳನ್ನು ಉಲ್ಲೇಖಿಸಿದ್ದಾರೆ. ಹೊಸ ‘ಕ್ವಾಡ್‘ ಸಂಘಟನೆಯಲ್ಲಿ ಅಮೆರಿಕ (ಜಾತ್ಯತೀತ, ಆದರೆ ಮುಖ್ಯವಾಗಿ ಕ್ರಿಶ್ಚಿಯನ್), ಭಾರತ (ಜಾತ್ಯತೀತ, ಆದರೆ ಮುಖ್ಯವಾಗಿ ಹಿಂದೂ), ಇಸ್ರೇಲ್ (ಯಹೂದಿ) ಮತ್ತು ಯುಎಇ (ಇಸ್ಲಾಮಿಕ್) ದೇಶಗಳಿದ್ದು, ಇವೆಲ್ಲ ವಿಶ್ವದ ಬಹುತ್ವವನ್ನು ಪ್ರತಿಬಿಂಬಿಸುತ್ತವೆ. ಹೀಗೆ ಪ್ರಪಂಚದ ಒಳಿತಿಗಾಗಿ ಬಹುತ್ವವನ್ನು ಬಳಸಿಕೊಳ್ಳಬಹುದಾದರೆ, ಭಾರತ ತನ್ನ ಒಳಿತಿಗಾಗಿ ಅದನ್ನೇ ಬಳಸಿಕೊಳ್ಳಬಹುದಲ್ಲವೇ‘ ಎಂದು ಚಿದಂಬರಂ ಟ್ವಿಟರ್‌ನಲ್ಲಿ ಕೇಳಿದ್ದಾರೆ.

ಭಾರತ–ಪೆಸಿಫಿಕ್ ಸಮುದ್ರ ಮಾರ್ಗಗಳನ್ನು ಯಾವುದೇ ಪ್ರಭಾವದಿಂದ ಮುಕ್ತವಾಗಿಸುವುದಕ್ಕಾಗಿ ಹೊಸ ಕಾರ್ಯತಂತ್ರ ರೂಪಿಸಿ, ಅದಕ್ಕೊಂದು ಆಕಾರ ನೀಡಲು ನವೆಂಬರ್ 2017ರಲ್ಲಿ, ಭಾರತ, ಜಪಾನ್, ಅಮೆರಿಕ ಮತ್ತು ಆಸ್ಟ್ರೇಲಿಯಾ ದೇಶಗಳು ಸೇರಿ ‘ಕ್ವಾಡ್‌‘ ಸಂಘಟನೆಯನ್ನು ರೂಪಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.