ADVERTISEMENT

ಸೇನಾಧಿಕಾರಿಗಳೊಂದಿಗೆ ಶೀಘ್ರದಲ್ಲೇ ಮೋದಿ ಸಂವಾದ

ಪಿಟಿಐ
Published 8 ಸೆಪ್ಟೆಂಬರ್ 2025, 16:06 IST
Last Updated 8 ಸೆಪ್ಟೆಂಬರ್ 2025, 16:06 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಭೂಸೇನೆ, ನೌಕಾಪಡೆ, ವಾಯುಪಡೆಯ ಉನ್ನತ ಅಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ಸಂವಾದ ನಡೆಸಲಿದ್ದಾರೆ.

ಕೋಲ್ಕತ್ತದಲ್ಲಿ ಮೂರು ಪಡೆಗಳ ಉನ್ನತ ಕಮಾಂಡರ್‌ಗಳ ಸಮಾವೇಶವು (ಸೆ. 15ರಿಂದ 17) ಮುಂದಿನ ವಾರ ನಡೆಯಲಿದೆ. ಇದನ್ನು ಉದ್ಘಾಟಿಸುವ ಪ್ರಧಾನಿಯು ನಂತರ ಸೇನೆಯ ಅಧಿಕಾರಿಗಳೊಂದಿಗೆ ಸಂವಾದಿಸಲಿದ್ದಾರೆ.

ಈ ಸಂವಾದವು ಆಪರೇಷನ್‌ ಸಿಂಧೂರ ಕುರಿತ ವಿವಿಧ ದೃಷ್ಟಿಕೋನ ಮತ್ತು ದೇಶದ ಮಿಲಿಟರಿಯ ಪರಾಕ್ರಮವನ್ನು ಮತ್ತಷ್ಟು ಹೆಚ್ಚಿಸುವ ಮಾರ್ಗಗಳನ್ನು ಉತ್ತೇಜಿಸುವ ನಿರೀಕ್ಷೆಯಿದೆ ಎಂದು ರಕ್ಷಣಾ ಸಚಿವಾಲಯವು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.