ADVERTISEMENT

ಅನರ್ಹತೆ ರದ್ದು ಕೋರಿ ಲಕ್ಷದ್ವೀಪದ ಮಾಜಿ ಸಂಸದ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಾಳೆ

ಪಿಟಿಐ
Published 27 ಮಾರ್ಚ್ 2023, 11:40 IST
Last Updated 27 ಮಾರ್ಚ್ 2023, 11:40 IST
ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಜೊತೆ ಮೊಹಮ್ಮದ್‌ ಫೈಜಲ್ (ಸಾಂಧರ್ಬಿಕ ಚಿತ್ರ)
ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಜೊತೆ ಮೊಹಮ್ಮದ್‌ ಫೈಜಲ್ (ಸಾಂಧರ್ಬಿಕ ಚಿತ್ರ)   

ನವದೆಹಲಿ: ಲೋಕಸಭೆಯ ಸದಸ್ಯತ್ವದಿಂದ ತಮ್ಮನ್ನು ಅನರ್ಹಗೊಳಿಸಿ ಹೊರಡಿಸಿರುವ ಆದೇಶವನ್ನು ಲೋಕಸಭೆಯ ಸಚಿವಾಲಯ ಹಿಂಪಡೆಯದೆ ಇರುವುದನ್ನು ಪ್ರಶ್ನಿಸಿ ಎನ್‌ಸಿಪಿ ನಾಯಕ, ಲಕ್ಷದ್ವೀಪದ ಮಾಜಿ ಸಂಸದ ಮೊಹಮ್ಮದ್‌ ಫೈಸಲ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ಗೆ ಮಂಗಳವಾರ ನಡೆಸಲಿದೆ.

ಕೊಲೆ ಯತ್ನಕ್ಕೆ ಸಂಬಂಧಿಸಿದ ಮೊಕದ್ದಮೆಯಲ್ಲಿ ಫೈಸಲ್‌ ಅವರನ್ನು ಅಪರಾಧಿ ಎಂದು ಲಕ್ಷದ್ವೀಪದ ಕವರಟ್ಟಿಯ ಸೆಷನ್ಸ್‌ ನ್ಯಾಯಾಲಯ ಜನವರಿ 11ರಂದು ಆದೇಶ ಹೊರಡಿಸಿತ್ತು. ಆದೇಶ ಹೊರಬೀಳುತ್ತಿದ್ದಂತೆ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.

ಫೈಜಲ್‌ ವಿರುದ್ಧ ನೀಡಲಾಗಿದ್ದ ತೀರ್ಪು ಮತ್ತು ಅವರಿಗೆ ವಿಧಿಸಲಾಗಿದ್ದ 10 ವರ್ಷಗಳ ಸಜೆಗೆ ಕೇರಳ ಹೈಕೋರ್ಟ್‌ ಜನವರಿ 25ರಂದು ತಡೆ ನೀಡಿದೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ಅನರ್ಹಗೊಳಿಸಿ ಹೊರಡಿಸಿರುವ ಆದೇಶವನ್ನು ಲೋಕಸಭೆ ಸಚಿವಾಲಯ ಹಿಂಪಡೆಯಬೇಕು ಎಂದು ಕೋರಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

ಫೈಸಲ್‌ ಪರ ವಕೀಲ ಎ.ಎಂ. ಸಿಂಘ್ವಿ ಅವರು ಈ ಕುರಿತ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್‌ ನರಸಿಂಹನ್‌ ಮತ್ತು ಜೆ.ಬಿ. ಪಾರ್ದೀವಾಲಾ ಅವರಿದ್ದ ಪೀಠಕ್ಕೆ ಸಲ್ಲಿಸಿದರು. ನ್ಯಾಯಾಲಯವು ಮಂಗಳವಾರ ಅರ್ಜಿಯ ವಿಚಾರಣೆ ನಡೆಸುವುದಾಗಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.