ADVERTISEMENT

ಮೋದಿ ಹೆಲಿಕಾಪ್ಟರ್‌ ಪರಿಶೀಲಿಸಿದ್ದ ಮೊಹಮ್ಮದ್ ಮೊಹ್ಸಿನ್ ರಾಜ್ಯಕ್ಕೆ ವಾಪಸ್

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 19:36 IST
Last Updated 22 ಏಪ್ರಿಲ್ 2019, 19:36 IST
   

ನವದೆಹಲಿ (ಪಿಟಿಐ): ಒಡಿಶಾದ ಸಂಬಲ್‌ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ತಪಾಸಣೆ ನಡೆಸಿದ್ದ ಚುನಾವಣಾ ಆಯೋಗದ ವೀಕ್ಷಕ, ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್ ಅವರನ್ನು ಕರ್ನಾಟಕ್ಕೆ ವಾಪಸ್ ಕಳುಹಿಸಲಾಗಿದೆ.

ಇವರು 1996ನೇ ಬ್ಯಾಚ್‌ನ ಐಎಎಸ್ ಅಧಿಕಾರಿ. ಎಸ್‌ಪಿಜಿ ಭದ್ರತೆ ಇರುವ ವ್ಯಕ್ತಿಗಳನ್ನು ತಪಾಸಣೆ ಮಾಡುವಂತಿಲ್ಲ ಎಂಬ ಆಯೋಗದ ನಿಯಮವನ್ನು ಮೊಹ್ಸಿನ್
ಉಲ್ಲಂಘಿಸಿದ್ದಾರೆ ಎಂದು ಹೇಳಿ ಅವರನ್ನು ಕಳೆದ ವಾರ ಆಯೋಗವು ಚುನಾವಣಾ ಕರ್ತವ್ಯದಿಂದ ಅಮಾನತು ಮಾಡಿತ್ತು.

ಮೋದಿ ಅವರ ಬೆಂಗಾವಲು ವಾಹನದ ತಪಾಸಣೆ ಮಾಡಲು ಮೊಹ್ಸಿನ್ ಮುಂದಾಗಿದ್ದರು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಅವರನ್ನು ಸಂಬಲ್‌ಪುರ ಮುಖ್ಯ ಕಚೇರಿಗೆ ಕಳುಹಿಸಲಾಗಿತ್ತು. ಇದೀಗ ಕರ್ನಾಟಕ ಮುಖ್ಯ ಚುನಾವಣಾ ಕಚೇರಿಗೆ ಕಳುಹಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.