ADVERTISEMENT

ಜನರು ತಮ್ಮ ಕರ್ತವ್ಯ ಪಾಲಿಸಬೇಕು: ಮೋಹನ್‌ ಭಾಗವತ್‌ಭಾಗವತ್‌

ಪಿಟಿಐ
Published 26 ಜನವರಿ 2026, 15:53 IST
Last Updated 26 ಜನವರಿ 2026, 15:53 IST
<div class="paragraphs"><p>ಮೋಹನ್‌ ಭಾಗವತ್‌</p></div>

ಮೋಹನ್‌ ಭಾಗವತ್‌

   

ಮುಜಫರ್‌ಪುರ: ‘ಭಾರತವನ್ನು ವಿಶ್ವದ ಮುಂಚೂಣಿ ಗಣರಾಜ್ಯವನ್ನಾಗಿ ಮಾಡಲು ದೇಶದ ನಾಗರಿಕರು ಸಂವಿಧಾನದಲ್ಲಿ ಅಡಕವಾಗಿರುವ ಪವಿತ್ರ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪಾಲಿಸಬೇಕು. ಸಂತೋಷ, ಶಾಂತಿ ಮತ್ತು ಧರ್ಮದ ಸಂದೇಶವನ್ನು ಜಗತ್ತಿಗೆ ಸಾರಬೇಕು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್‌ ಭಾಗವತ್‌ ಕರೆ ನೀಡಿದ್ದಾರೆ.

ಮುಜಫರ್‌ನಗರದ ಆರ್‌ಎಸ್‌ಎಸ್ ವಿಭಾಗೀಯ ಕಚೇರಿಯಲ್ಲಿ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ADVERTISEMENT

‘ಸಂವಿಧಾನ ಧರ್ಮವನ್ನು ಬೋಧಿಸುತ್ತದೆ. ಅದರ ನಿರಂತರ ಓದು ನಮ್ಮ ಕರ್ತವ್ಯಗಳನ್ನು ಜಾಗೃತಗೊಳಿಸುತ್ತದೆ. ಪ್ರತಿಯೊಬ್ಬರೂ ಸಂವಿಧಾನದ ಪೀಠಿಕೆ ಓದಲು,  ರಾಜ್ಯನೀತಿ, ಮೂಲಭೂತ ಕರ್ತವ್ಯ ಮತ್ತು ಹಕ್ಕುಗಳನ್ನು ತಿಳಿಯಲು ಪ್ರೇರೇಪಿಸಬೇಕು’ ಎಂದರು.

‘ಸಂವಿಧಾನ ರಚನಾಕಾರರು ಧರ್ಮಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರು. ಅಂಬೇಡ್ಕರ್‌ ಅವರೂ ಧರ್ಮದ ಅಗತ್ಯದ ಬಗ್ಗೆ ಹಲವು ಬಾರಿ ಹೇಳಿದ್ದರು. ದೇಶದಲ್ಲಿ ಕಾನೂನುಗಳಿವೆ. ಆದರೆ, ಎಲ್ಲವೂ ಧರ್ಮದ ಆಧಾರದ ಮೇಲೆ ನಡೆಯುತ್ತದೆ’ ಎಂದರು.

ತ್ರಿವರ್ಣದ ಮಹತ್ವ ತಿಳಿಸಿದ ಅವರು,‘ಕೇಸರಿಯು ತ್ಯಾಗ, ಶೌರ್ಯ ಮತ್ತು ಸನಾತನ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಬಿಳಿ ಬಣ್ಣ ನಿಷ್ಕಲ್ಮಶ ಚಿಂತನೆ ಮತ್ತು ಹಸಿರು ಸಮೃದ್ಧಿಯ ದ್ಯೋತಕಗಳಾಗಿವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.