ಪಾಟ್ನಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುರುವಾರ ರಾಷ್ಟ್ರೀಯ ಚಿಂತಕರಿಗಾಗಿ ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಷನ್ ಅನ್ನು ಗುರುವಾರ ಬಿಡುಗಡೆಗೊಳಿಸಿದರು.
ಬಿಹಾರ ರಾಜಧಾನಿಗೆ ಒಂದು ದಿನದ ಪ್ರವಾಸ ಕೈಗೊಂಡಿರುವ ಭಾಗವತ್, 'ಆಡಿಯೊ ಕುಂಭ್' ಎಂಬ ಆ್ಯಪ್ ಬಿಡುಗಡೆ ಮಾಡಿದ್ದಾರೆ.
ಮೊಬೈಲ್ ಸ್ನೇಹಿ ನೂತನ ಆ್ಯಪ್‌ನಿಂದ ರಾಷ್ಟ್ರೀಯ ಚಿಂತನೆಯನ್ನು ಬಹು ದೂರ ಹರಡಲು ನೆರವಾಗಲಿದೆ ಎಂದು ಮೋಹನ್ ಭಾಗವತ್ ಶ್ಲಾಘಿಸಿದ್ದಾರೆ.
ನೂತನ ಆ್ಯಪ್ ಅಸಂಖ್ಯಾತ ಆಡಿಯೊ ಪುಸ್ತಕ ಹಾಗೂ ಪಾಡ್‌ಕಾಸ್ಟ್‌ಗಳನ್ನು ಒಳಗೊಂಡಿರಲಿವೆ.
ಏತನ್ಮಧ್ಯೆ ಸಂಘ ಪರಿವಾರದ ಹಿರಿಯ ಕಾರ್ಯಕರ್ತರು ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.