ADVERTISEMENT

ಜುಲೈ 2ನೇ ವಾರದಲ್ಲಿ ಮುಂಗಾರು ಚುರುಕು?

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 17:48 IST
Last Updated 1 ಜುಲೈ 2021, 17:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ನೈರುತ್ಯ ಮುಂಗಾರು ಸದ್ಯ ಸ್ವಲ್ಪ ಮಟ್ಟಿಗಿನ ಬಿಡುವು ನೀಡಿದ್ದು, ಜುಲೈ ಎರಡನೇ ವಾರದ ನಂತರ ದೇಶದಾದ್ಯಂತ ಮಳೆ ಚುರುಕುಗೊಳ್ಳುವ ಸಂಭವವಿದೆ.

ಜುಲೈ 2021ರಲ್ಲಿ ದೇಶದಾದ್ಯಂತ ವಾಡಿಕೆ ಮಳೆ ಸುರಿಯುವ ಸಂಭವವಿದೆ. ಇದು, ಸರಾಸರಿ ಮಳೆಯ ಶೇ 94–106ರಷ್ಟು ಇರುವ ಸಂಭವಗಳಿವೆ ಎಂದು ಭಾರತದ ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಎಂ.ಮೊಹಾಪಾತ್ರ ಅವರು ತಿಳಿಸಿದ್ದಾರೆ.

ಜೂನ್‌ 19ರ ನಂತರ ಮುಂಗಾರು ಹಂಗಾಮಿನ ಮಳೆ ಚುರುಕುಗೊಂಡಿಲ್ಲ. ಆದರೂ, ಜೂನ್‌ ತಿಂಗಳಲ್ಲಿ ಸರಾಸರಿ ಮಳೆಗಿಂತಲೂ ಶೇ 10ರಷ್ಟು ಹೆಚ್ಚು ಮಳೆಯಾಗಿದೆ. ಈ ಪೈಕಿ ಹೆಚ್ಚಿನ ಮಳೆಯು ಜೂನ್‌ 3 ಮತ್ತು 19ರ ನಡುವೆ ಆಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.