ADVERTISEMENT

ಎಂ.ಫಿಲ್‌ ಮಾನ್ಯತೆ ಪಡೆದ ಪದವಿಯಲ್ಲ: ಯುಜಿಸಿ

ಪಿಟಿಐ
Published 27 ಡಿಸೆಂಬರ್ 2023, 14:04 IST
Last Updated 27 ಡಿಸೆಂಬರ್ 2023, 14:04 IST
.
.   

ನವದೆಹಲಿ: ‘ಎಂ.ಫಿಲ್‌ ಮಾನ್ಯತೆ ಪಡೆದ ಪದವಿಯಲ್ಲ, ಇಂತಹ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಡಿ’ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವಿದ್ಯಾರ್ಥಿಗಳಿಗೆ ಸೂಚಿಸಿದೆ. ಅಲ್ಲದೆ ಎಂ.ಫಿಲ್‌ ಕೋರ್ಸ್‌ಗಳನ್ನು ನಡೆಸುತ್ತಿರುವ ವಿಶ್ವವಿದ್ಯಾನಿಲಯಗಳಿಗೂ ಎಚ್ಚರಿಕೆ ನೀಡಿದೆ. 

ಕೆಲವು ವಿಶ್ವವಿದ್ಯಾನಿಲಯಗಳು ಎಂ.ಫಿಲ್‌ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿರುವುದನ್ನು ಗಮನಿಸಿರುವ ಯುಜಿಸಿಯು, ತಕ್ಷಣ ಎಂ.ಫಿಲ್‌ ಪ್ರವೇಶಾತಿ ನಿಲ್ಲಿಸುವಂತೆ ಸೂಚಿಸಿದೆ.

‘ಉನ್ನತ ಶಿಕ್ಷಣ ಸಂಸ್ಥೆಗಳು ಎಂ.ಫಿಲ್‌ ಕೋರ್ಸ್‌ಗಳನ್ನು ನಡೆಸುವಂತಿಲ್ಲ ಎಂದು 2022ರ ಯುಜಿಸಿ ನಿಯಮಾವಳಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ’ ಎಂದು ಯುಜಿಸಿ ಕಾರ್ಯದರ್ಶಿ ಮನೀಷ್‌ ಜೋಶಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.