ADVERTISEMENT

ಮಹಾರಾಷ್ಟ್ರ: 20ನೇ ದಿನಕ್ಕೆ ಕಾಲಿಟ್ಟ ಎಂಎಸ್‌ಆರ್‌ಟಿಸಿ ನೌಕರರ ಮುಷ್ಕರ

ಪಿಟಿಐ
Published 16 ನವೆಂಬರ್ 2021, 7:03 IST
Last Updated 16 ನವೆಂಬರ್ 2021, 7:03 IST
‌ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮವನ್ನು ರಾಜ್ಯ ಸರ್ಕಾರದಲ್ಲಿ ವಿಲೀನಗೊಳಿಸುವಂತೆ ಒತ್ತಾಯಿಸಿ ಮಹಾರಾಷ್ಟ್ರದ ಕರಾಡ್‌ನಲ್ಲಿ ನಿಗಮದ ನೌಕರರು ಪ್ರತಿಭಟನೆ ನಡೆಸಿದರು. 
‌ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮವನ್ನು ರಾಜ್ಯ ಸರ್ಕಾರದಲ್ಲಿ ವಿಲೀನಗೊಳಿಸುವಂತೆ ಒತ್ತಾಯಿಸಿ ಮಹಾರಾಷ್ಟ್ರದ ಕರಾಡ್‌ನಲ್ಲಿ ನಿಗಮದ ನೌಕರರು ಪ್ರತಿಭಟನೆ ನಡೆಸಿದರು.    

ಮುಂಬೈ: ನಷ್ಟದಲ್ಲಿರುವ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು(ಎಂಎಸ್‌ಆರ್‌ಟಿಸಿ) ರಾಜ್ಯ ಸರ್ಕಾರದೊಂದಿಗೆ ವಿಲೀನಗೊಳಿಸಲು ಆಗ್ರಹಿಸಿ ನಿಗಮದ ನೌಕರರು ನಡೆಸುತ್ತಿರುವ ಮುಷ್ಕರ 20ನೇ ದಿನಕ್ಕೆ ಕಾಲಿಟ್ಟಿದೆ.

ಅಕ್ಟೋಬರ್ 28ರಿಂದ ನೌಕರರು ಅನಿರ್ದಿಷ್ಟಾವಧಿಯ ಮುಷ್ಕರ ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ನ.9ರಿಂದ ಎಂಎಸ್‌ಆರ್‌ಟಿಸಿಯ 250 ಬಸ್ ಡಿಪೋಗಳನ್ನುಮುಚ್ಚಲಾಗಿದೆ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ನಡುವೆ, ನಿಗಮದಲ್ಲಿರುವ 92,266 ನೌಕರರ ಪೈಕಿ, ಸೋಮವಾರ 6,900 ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇದರಲ್ಲಿ ಆಡಳಿತ ಕಚೇರಿಯ ಸಿಬ್ಬಂದಿ, ಚಾಲಕರು, ನಿರ್ವಾಹಕರು, ಕಾರ್ಯಾಗಾರದ ಸಿಬ್ಬಂದಿ ಸೇರಿದ್ದಾರೆ. ಈ ಸಂಖ್ಯೆ ಮಂಗಳವಾರದ ವೇಳೆಗೆ ಹೆಚ್ಚಾಗಬಹುದು ಎಂದು ಎಂಎಸ್‌ಆರ್‌ಟಿಸಿ ವಕ್ತಾರರೊಬ್ಬರು ತಿಳಿಸಿದ್ದಾರೆ.

ADVERTISEMENT

ಸಾರಿಗೆ ನಿಗಮ ಸೋಮವಾರದಿಂದ 100 ಬಸ್‌ಗಳನ್ನು ರಸ್ತೆಗೆ ಇಳಿಸಿದೆ. ಈ ನಡುವೆ ಸರ್ಕಾರ ನೌಕರರ ಬೇಡಿಕೆ ಪರಿಶೀಲಿಸುವ ಸಂಬಂಧ ತ್ರಿಸದಸ್ಯರ ಸಮಿತಿಯನ್ನು ರಚಿಸಿದೆ. ಈ ಸಮಿತಿ ಎದುರು ಲಿಖಿತವಾಗಿ ತಮ್ಮ ಅಹವಾಲು ಸಲ್ಲಿಸುವಂತೆ ನೌಕರರ ಸಂಘದ ನಾಯಕ ಅಜಯ್‌ಕುಮಾರ್ ಗುಜ್ಜಾರ್‌ಗೆ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.