ADVERTISEMENT

ಉತ್ತರ ಪ್ರದೇಶ: ಅಧಿಕ ಮಳೆಯಿಂದ ರೈತರು ಕಂಗಾಲು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 12:41 IST
Last Updated 9 ಅಕ್ಟೋಬರ್ 2022, 12:41 IST
ಉತ್ತರ ಪ್ರದೇಶ (ಸಾಂದರ್ಭಿಕ ಚಿತ್ರ)
ಉತ್ತರ ಪ್ರದೇಶ (ಸಾಂದರ್ಭಿಕ ಚಿತ್ರ)   

ಲಖನೌ: ಈ ವರ್ಷಉತ್ತರ ಪ್ರದೇಶದಲ್ಲಿ ಮುಂಗಾರಿನ ಅವಧಿಯಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ ಆಗಿತ್ತು ಮತ್ತು ಅದರ ನಂತರ ಅತ್ಯಧಿಕ ಮಳೆಯಾಗಿದೆ. ಇದರಿಂದಾಗಿ ರಾಜ್ಯದ ರೈತರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಜೊತೆಗೆ, ಭವಿಷ್ಯದ ಚಿಂತೆ ಅವರನ್ನು ಕಾಡುತ್ತಿದೆ.

ಉತ್ತರ ಪ್ರದೇಶದ ಒಟ್ಟು 75 ಜಿಲ್ಲೆಗಳ ಪೈಕಿ 67 ಜಿಲ್ಲೆಗಳಲ್ಲಿ ಕಳೆದ ವಾರ (ಸೆಪ್ಟೆಂಬರ್‌ 30ರ ನಂತರ) ಅತ್ಯಧಿಕ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ವೈಪರೀತ್ಯದಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ಅಗತ್ಯ ನೆರವು ನೀಡಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಆದರೆ ಈ ಪರಿಹಾರ ಕಾರ್ಯಗಳು ಅಲ್ಪ ಮಟ್ಟದ್ದಾಗಿರುತ್ತದೆ ಮತ್ತು ಅತ್ಯಂತ ವಿಳಂಬವಾಗಿ ನಡೆಯಲಿದೆ ಎಂದು ಹಲವರು ಭಾವಿಸಿದ್ದಾರೆ.

‘ಸುದೀರ್ಘ ಅವಧಿಯ ಸರಾಸರಿಗೆ (ಎಲ್‌ಪಿಇ) ಹೋಲಿಸಿದರೆರಾಜ್ಯದಲ್ಲಿ ದಾಖಲಾಗಿರುವ ಮಳೆ ಪ್ರಮಾಣವು ಅಧಿಕವಾಗಿದೆ. ಮಳೆಯಿಂದ ಆಗಿರುವ ಹಾನಿ ಮತ್ತು ರೈತರಿಗೆ ಆಗಿರುವ ನಷ್ಟದ ಕುರಿತು ಅಂಕಿಅಂಶವನ್ನು ಸಲ್ಲಿಸುವಂತೆ ಜಿಲ್ಲಾಡಳಿತಗಳಿಗೆ ಆದೇಶ ನೀಡಲಾಗಿದೆ’ ಎಂದು ಉತ್ತರ ಪ್ರದೇಶದಪರಿಹಾರ ಆಯುಕ್ತ ಪ್ರಭು ನಾರಾಯಣ ಸಿಂಗ್‌ ಹೇಳಿದ್ದಾರೆ.

ADVERTISEMENT

ಭಾರಿ ಮಳೆಯಿಂದಾಗಿ ರಾಜ್ಯದ ನಗರಗಳು ಮತ್ತು ಪಟ್ಟಣಗಳು ಜಲಾವೃತಗೊಂಡಿದ್ದವು. ಆದರೆ ಗ್ರಾಮೀಣ ಭಾಗದ ಜನರನ್ನು ಭಾರಿ ಸಂಕಷ್ಟಕ್ಕೀಡು ಮಾಡಿದೆ. ಭತ್ತ, ಜೋಳ, ಆಲೂಗೆಡ್ಡೆ, ಬಾಜ್ರ ಮುಂತಾದ ಪ್ರಮುಖ ಬೆಳೆಗಳು ಹಾನಿಗೀಡಾಗಿವೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.