ADVERTISEMENT

ಕೇರಳ: ಮುಲ್ಲಪೆರಿಯಾರ್ ಅಣೆಕಟ್ಟೆಯ 6 ಕ್ರೆಸ್ಟ್‌ಗೇಟ್‌ಗಳಿಂದ ನೀರು ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2018, 9:14 IST
Last Updated 22 ಆಗಸ್ಟ್ 2018, 9:14 IST
ಮುಲ್ಲಪೆರಿಯಾರ್ ಅಣೆಕಟ್ಟು (ಕೃಪೆ: ಪಿಟಿಐ)
ಮುಲ್ಲಪೆರಿಯಾರ್ ಅಣೆಕಟ್ಟು (ಕೃಪೆ: ಪಿಟಿಐ)   

ಕುಮಿಳಿ: ಮುಲ್ಲಪೆರಿಯಾರ್ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಸ್ವಲ್ಪ ಏರಿಕೆ ಕಂಡು ಬಂದಿದ್ದರಿಂದ ಬುಧವಾರ ಮುಂಜಾನೆ 6 ಶಟರ್ಗಳನ್ನು ತೆರೆಯಲಾಗಿದೆ. ನೀರಿನ ಮಟ್ಟ 140.05 ಅಡಿ ತಲುಪಿದ್ದರಿಂದ ಶಟರ್ ತೆರೆದು ನೀರು ಹೊರ ಬಿಡಲಾಗಿದೆ.ನಾಲ್ಕು ಶಟರ್ ಗಳನ್ನು ಎರಡು ಅಡಿ ಮತ್ತು ಇನ್ನೆರಡು ಶಟರ್ ಗಳನ್ನು ಒಂದು ಅಡಿ ಎತ್ತರಕ್ಕೆ ತೆರೆಯಲಾಗಿದೆ.

ಸೆಕೆಂಡ್ ಗೆ 2885 ಘನ ಅಡಿ ನೀರು ಅಣೆಕಟ್ಟಿಗೆ ಹರಿದುಬರುತ್ತಿದೆ. 2212 ಘನ ಅಡಿ ನೀರು ತಮಿಳುನಾಡಿಗೆ ಹರಿಯುತ್ತಿದೆ.673 ಘನ ಅಡಿ ನೀರು ಪೆರಿಯಾಟ್ಟಿಗೆ ಹರಿಯುತ್ತಿದೆ.ಆದರೆ ಅಣೆಕಟ್ಟಿನ ಸುತ್ತಲಿನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ.

ಇಡುಕ್ಕಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಈ ಅಣೆಕಟ್ಟಿನಲ್ಲಿ ನೀರಿನ ಮಟ್ಟ 2400.07 ಅಡಿ ಆಗಿದೆ.ಚೆರುತೋಣಿ ಅಣೆಕಟ್ಟಿನ 2.3.4 ಶಟರ್ ಗಳನ್ನು 6 ಮೀಟರ್ ಎತ್ತರಕ್ಕೆ ತೆರೆಯಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.