ADVERTISEMENT

ಎಂಜಿನ್‌ನಲ್ಲಿ ದೋಷ: ಗೋವಾಕ್ಕೆ ಮರಳಿದ ಇಂಡಿಗೊ ವಿಮಾನ

ಪಿಟಿಐ
Published 23 ಆಗಸ್ಟ್ 2022, 14:23 IST
Last Updated 23 ಆಗಸ್ಟ್ 2022, 14:23 IST
–ಪ್ರಾತಿನಿಧಿಕ ಚಿತ್ರ
–ಪ್ರಾತಿನಿಧಿಕ ಚಿತ್ರ   

ಪಣಜಿ/ಮುಂಬೈ: ಮುಂಬೈಗೆ ಹೊರಟಿದ್ದ ಇಂಡಿಗೊ ವಿಮಾನವೊಂದರ ಎಂಜಿನ್‌ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ವಿಮಾನವು ಗೋವಾ ವಿಮಾನ ನಿಲ್ದಾಣಕ್ಕೆ ಮರಳಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಈ ವಿಮಾನದಲ್ಲಿ 187 ಮಂದಿ ಪ್ರಯಾಣಿಕರಿದ್ದರು. ನೌಕಾಪಡೆಯ ರಕ್ಷಣಾ ತಂಡವು ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿಸಿದೆ ಎಂದು ವಿಮಾನನಿಲ್ದಾಣದ ನಿರ್ದೇಶಕ ಎಸ್‌.ವಿ.ಟಿ. ಧನಂಜಯ ರಾವ್‌ ಹೇಳಿದ್ದಾರೆ.

ಈ ವಿಮಾನ ನಿಲ್ದಾಣವು ನೌಕಾಪಡೆಯ ಐಎನ್‌ಎಸ್ ಹಂಸಾದ ಭಾಗವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.