ADVERTISEMENT

ಆದಾಯ ಮೀರಿದ ಆಸ್ತಿ: ಠಾಕ್ರೆ ವಿರುದ್ಧ ತನಿಖೆ– ಹೈಕೋರ್ಟ್‌ಗೆ ಪೊಲೀಸರ ಮಾಹಿತಿ

ಪಿಟಿಐ
Published 8 ಡಿಸೆಂಬರ್ 2022, 15:50 IST
Last Updated 8 ಡಿಸೆಂಬರ್ 2022, 15:50 IST
ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ   

ಮುಂಬೈ: ಆದಾಯ ಮೀರಿದ ಆಸ್ತಿ ಹೊಂದಿರುವ ದೂರಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರನ ವಿರುದ್ಧ ಪ್ರಾಥಮಿಕ ತನಿಖೆ ನಡೆಸಲಾಗಿದೆ ಎಂದು ಮುಂಬೈ ಪೊಲೀಸರು ಗುರುವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ನ್ಯಾಯಮೂರ್ತಿಗಳಾದ ಧೀರಜ್‌ ಠಾಕೂರ್ ಮತ್ತು ವಾಲ್ಮೀಕಿ ಮೆನೆಜೆಸ್‌ ಅವರಿದ್ದ ದ್ವಿಸದಸ್ಯ ಪೀಠಕ್ಕೆ ಸರ್ಕಾರಿ ಅಭಿಯೋಜಕ ಅರುಣಾ ಕಾಮತ್ ಪೈ ಈ ಮಾಹಿತಿ ನೀಡಿದರು.

ಠಾಕ್ರೆ ಕುಟುಂಬದ ವಿರುದ್ಧ ಸಿಬಿಐ ಅಥವಾ ಇ.ಡಿ ತನಿಖೆ ಕೋರಿ ಗೌರಿ ಭಿಡೆ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಆಧಾರರಹಿತವಾಗಿದ್ದು, ವಜಾ ಮಾಡಬೇಕು ಎಂದು ಠಾಕ್ರೆ ಕೋರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.