ADVERTISEMENT

ರಾವುತ್‌ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಪಿಟಿಐ
Published 19 ಸೆಪ್ಟೆಂಬರ್ 2022, 14:12 IST
Last Updated 19 ಸೆಪ್ಟೆಂಬರ್ 2022, 14:12 IST
ಸಂಜಯ ರಾವುತ್‌
ಸಂಜಯ ರಾವುತ್‌   

ಮುಂಬೈ: ಶಿವಸೇನಾ ಸಂಸದ ಸಂಜಯ ರಾವುತ್‌ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಇಲ್ಲಿನ ವಿಶೇಷ ನ್ಯಾಯಾಲಯವು ಸೋಮವಾರಇನ್ನೂ 14 ದಿನಗಳವರೆಗೆ ವಿಸ್ತರಿಸಿದೆ.

ಪತ್ರಾ ಚಾಳ್‌ ಯೋಜನೆಯಲ್ಲಿ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ರಾವುತ್‌ ಅವರನ್ನು ಜಾರಿ ನಿರ್ದೇಶನಾಲಯವು ಆಗಸ್ಟ್‌ 1ರಂದು ಬಂಧಿಸಿತ್ತು. ಈ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು ಪೂರಕ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತು. ಇದನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯವು ರಾವುತ್‌ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿತು.

ವಿಶೇಷ ನ್ಯಾಯಾಧೀಶ ಎಂ.ಜಿ. ದೇಶಪಾಂಡೆ ಅವರು, ರಾವುತ್‌ ಅವರ ಆಪ್ತ ಪ್ರವೀಣ್‌ ರಾವುತ್‌ ಅವರನ್ನು ಒಳಗೊಂಡಂತೆ ಪ್ರಕರಣದ ಎಲ್ಲಾ ಆರೋಪಿಗಳಿಗೂ ಸಮನ್ಸ್‌ ಜಾರಿ ಮಾಡಿದರು.

ADVERTISEMENT

ಇದರ ಜೊತೆಯಲ್ಲೇ ಜಾಮೀನು ಕೋರಿ ರಾವುತ್‌ ಅವರು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ‘ಪೂರಕ ಆರೋಪಪಟ್ಟಿಗಳಲ್ಲಿ ಏನಿದೆ ಎಂದು ಕೂಲಂಕಷವಾಗಿ ನೋಡಬೇಕು’ ಎಂದು ರಾವುತ್‌ ಅವರ ವಕೀಲರು ಹೇಳಿದ್ದರಿಂದ, ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯವು ಸೆ.21ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.