ADVERTISEMENT

ಮುಂಬೈ: ದಾವೂದ್‌ ಇಬ್ರಾಹಿಂ ತಂಡದೊಂದಿಗೆ ಸಂಪರ್ಕ ಹೊಂದಿದ್ದ ಐವರ ಬಂಧನ

ಪಿಟಿಐ
Published 11 ಅಕ್ಟೋಬರ್ 2022, 8:25 IST
Last Updated 11 ಅಕ್ಟೋಬರ್ 2022, 8:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ನಡೆಸುತ್ತಿರುವ 'ಡಿ' ಕಂಪನಿ ಜೊತೆ ಸಂಪರ್ಕ ಹೊಂದಿದ್ದ ಐವರು ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ದಾವೂದ್ ಆಪ್ತ ಸಹಾಯಕ ಛೋಟಾ ಶಕೀಲ್‌ನ ಸಹೋದರ ಸಂಬಂಧಿ ಸಲೀಂ ಕುರೇಶಿ ಅಲಿಯಾಸ್‌ ಸಲೀಂ ಫ್ರೂಟ್‌ ಮತ್ತು ಉದ್ಯಮಿ ರಿಯಾಜ್‌ ಭಾಟಿ ಅವರನ್ನು ಸುಲಿಗೆ ನಿಗ್ರಹ ದಳ (ಎಇಸಿ) ಬಂಧಿಸಿತ್ತು. ಮಹಾರಾಷ್ಟ್ರದ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಅಡಿ ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ತನಿಖೆ ವೇಳೆ ಇನ್ನೂ ಐವರು ಕೃತ್ಯದಲ್ಲಿ ಪಾಲ್ಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಯಿತು. ಇದೀಗ ಅಜಯ್‌ ಗಂಡ, ಫಿರೋಜ್‌ ಚಮ್ಡ, ಸಮೀರ್‌ ಖಾನ್‌, ಪಾಪ ಪಠಾನ್‌ ಮತ್ತು ರಮ್ಜಾಜ್‌ ರೆಡ್ಕರ್‌ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಮುಂಬೈನ ವರ್ಸೊವಾ ಪೊಲೀಸ್‌ ಠಾಣೆಯಲ್ಲಿ ರಿಯಾಜ್‌ ಭಾಟಿ ವಿರುದ್ಧ ಸುಲಿಗೆ ಪ್ರಕರಣ ದಾಖಲಾಗಿತ್ತು. ಈತನಿಗೆ ದಾವೂದ್‌ ಇಬ್ರಾಹಿಂ ಜೊತೆ ಸಂಪರ್ಕವಿತ್ತು. ಉದ್ಯಮಿಯೊಬ್ಬರಿಗೆ ಬೆದರಿಕೆ ಒಡ್ಡಿದ್ದ ಆರೋಪಿಗಳು ₹30 ಲಕ್ಷ ಬೆಲೆಯ ಕಾರು ಮತ್ತು ₹7.5 ಲಕ್ಷ ನಗದು ಬೇಡಿಕೆ ಇಟ್ಟಿದ್ದರು. ಈ ಪ್ರಕರಣದಲ್ಲಿ ಛೋಟಾ ಶಕೀಲ್‌ ಸಂಬಂಧಿ ಸಲೀಮ್‌ ಫ್ರುಟ್‌ ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.