ADVERTISEMENT

ಪಂಜಾಬ್‌ಗೆ ತೆರಳಿದ್ದಾಗ ಪೊಲೀಸ್‌ ವಶದಿಂದ ತಪ್ಪಿಸಿಕೊಂಡ ಆರೋಪಿ

ಮುಂದ್ರಾ ಬಂದರಿನಲ್ಲಿ ₹ 21 ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 16:10 IST
Last Updated 18 ಫೆಬ್ರುವರಿ 2024, 16:10 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಭುಜ್‌: ಗುಜರಾತ್‌ನ ಮುಂದ್ರಾ ಬಂದರಿನಲ್ಲಿ 2,988 ಕೆ.ಜಿ. ಹೆರಾಯಿನ್ ಜಪ್ತಿ ಪ್ರಕರಣದ ಆರೋಪಿಯೊಬ್ಬ ಪಂಜಾಬ್‌ನಲ್ಲಿ ಪೊಲೀಸರ ವಶದಿಂದ ತಪ್ಪಿಸಿಕೊಂಡು, ಪರಾರಿಯಾಗಿರುವುದಾಗಿ ಪೊಲೀಸರು ಭಾನುವಾರ ಹೇಳಿದ್ದಾರೆ.

ಜೋಬನ್‌ಜಿತ್ ಸಿಂಗ್‌ ಸಂಧು ಪರಾರಿಯಾಗಿರುವ ಆರೋಪಿ.

ADVERTISEMENT

‘ಹೆರಾಯಿನ್ ಜಪ್ತಿ ಪ್ರಕರಣದಲ್ಲಿ ಬಂಧಿತನಾಗಿದ್ದ ಸಂಧುನನ್ನು ಕಛ್‌ ಜೈಲಿನಲ್ಲಿ ಇರಿಸಲಾಗಿತ್ತು. ಬೇರೊಂದು ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಲುವಾಗಿ ಪಂಜಾಬ್‌ನ ಅಮೃತಸರಕ್ಕೆ ಕರೆದೊಯ್ಯಲಾಗಿತ್ತು. ಮರಳಿ ಕರೆ ತರುವ ಸಂದರ್ಭದಲ್ಲಿ ಆರೋಪಿ ಶನಿವಾರ ಪರಾರಿಯಾಗಿದ್ದಾನೆ’ ಎಂದು ಕಛ್(ಪಶ್ಚಿಮ) ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಹೇಂದ್ರ ಬಗಾಡಿಯಾ ತಿಳಿಸಿದ್ದಾರೆ.

‘ಪಂಜಾಬ್‌ ಪೊಲೀಸರ ನೆರವಿನಿಂದ ಆರೋಪಿ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.