ಕೊಯಮತ್ತೂರು: ಹಿಂದೂ ಸಂಘಟನೆ ಮುಖಂಡರ ಹತ್ಯೆ ಸಂಚು ಸಂಬಂಧ ತಮಿಳುನಾಡಿನ ಮೂರು ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ದಾಳಿ ನಡೆಸಿದೆ.
ಹಿಂದೂ ಮಕ್ಕಳ್ ಕಚ್ಚಿ ಮುಖ್ಯಸ್ಥ ಅರ್ಜುನ್ ಸಂಪತ್ ಮತ್ತು ಹಿಂದೂ ಮುನ್ನಾನಿ ಮುಖಂಡ ಮೂಕಾಂಬಿಕೈ ಮಣಿ ಹಾಗೂ ಇತರ ಮುಖಂಡರನ್ನು ಕೊಲ್ಲಲು ಸಂಚು ರೂಪಿಸಿದ್ದ ಮಾಹಿತಿ ಮೇರೆಗೆ ಸೆಪ್ಟೆಂಬರ್‌ನಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದರು. ಇವರಿಗೆ ಆಶ್ರಯ ನೀಡಿದ ಹಾಗೂ ಸಾರಿಗೆ ವ್ಯವಸ್ಥೆ ಮಾಡಿದ ಆರೋಪದಲ್ಲಿ ನಂತರ ಇಬ್ಬರನ್ನು ಬಂಧಿಸಲಾಗಿತ್ತು.
ಐ.ಎಸ್ ಉಗ್ರರ ಹೋರಾಟದ ಮಾದರಿ ಮತ್ತು ಇತರ ಉಗ್ರ ಸಂಘಟನೆಗಳಿಂದ ಈ ಆರೋಪಿಗಳು ಪ್ರೇರಣೆ ಪಡೆದು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದರು. ಈ ಸಂಬಂಧದ ತನಿಖೆಯನ್ನು ತದನಂತರ ರಾಷ್ಟ್ರೀಯ ತನಿಖಾ ಏಜೆನ್ಸಿಗೆ ವಹಿಸಲಾಗಿತ್ತು. ಬಂಧಿಸಲಾಗಿರುವ ಮೂವರ ಮನೆಗಳ ಮೇಲೆ ಈಗ ದಾಳಿ ನಡೆಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.