ADVERTISEMENT

ರೆಡ್‌ ಝೋನ್‌ ವಲಯದಲ್ಲಿ ಪತ್ನಿ ಹತ್ಯೆ: ತಪ್ಪೊಪ್ಪಿಕೊಂಡ ಪತಿ

ಬಂಧಿಸಲು ಕಾದುಕುಳಿತ ಪೊಲೀಸರು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 22:18 IST
Last Updated 26 ಏಪ್ರಿಲ್ 2020, 22:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪತ್ನಿಯನ್ನು ಕೊಲೆ ಮಾಡಿದ ಪತಿ ಪೊಲೀಸರಿಗೆ ಕರೆ ಮಾಡಿ ತಾನಾಗಿಯೇ ತಪ್ಪೊಪ್ಪಿಕೊಂಡ.

ಇಂತಹದ್ದೊಂದು ವಿಚಿತ್ರ ಘಟನೆ ನಡೆದದ್ದು, ಕೋವಿಡ್-‌19 ಕಂಟೇನ್ಮೆಂಟ್‌ ವಲಯವಾಗಿರುವ ಪಶ್ಚಿಮ ದೆಹಲಿಯ ಮದಿಪುರದಲ್ಲಿ.

ಶನಿವಾರ ಬೆಳಗ್ಗೆ 3.56ರ ವೇಳೆಗೆ ಪೊಲೀಸರಿಗೆ ಕರೆ ಮಾಡಿದ ರಹಿಸುಲ್‌ ಅಲಂ ಎಂಬ ವ್ಯಕ್ತಿ, ತನ್ನ ಪತ್ನಿ ಗುಲ್ಶನ್ ಳನ್ನು‌ (39) ಹತ್ಯೆ ಮಾಡಿರುವುದಾಗಿ ಹೇಳಿದ.

ADVERTISEMENT

ಘಟನೆ ನಡೆದ ಸ್ಥಳಕ್ಕೆ ಪೊಲೀಸರು ತಕ್ಷಣ ತೆರಳಿದರು. ಆದರೆ ಅದು ಕೋವಿಡ್-‌19 ರೆಡ್‌ ಝೋನ್‌ ಎಂದು ತಿಳಿದದ್ದು ಅಲ್ಲಿಗೆ ಹೋದ ಬಳಿಕವೆ. ಆರೋಪಿಗೆ ಆ ಪ್ರದೇಶದಿಂದ ಹೊರಬರುವಂತೆ ಸೂಚಿಸಿದ ಪೊಲೀಸರು ಬಳಿಕವಷ್ಟೆ ಆತನನ್ನು ಬಂಧಿಸಿ ಕ್ವಾರಂಟೈನ್‌ಗೆ
ಕಳುಹಿಸಿದರು.

ಸೋಂಕು ನಿವಾರಕ ಸಿಂಪಡಣೆ: ಅಪರಾಧ ನಡೆದಿರುವ ಸ್ಥಳ ರೆಡ್‌ ಝೋನ್‌ ಎನ್ನುವುದನ್ನು ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ ಹಾಗೂ ವಿಪತ್ತು ನಿರ್ವಹಣಾ ಅಧಿಕಾರಿಗಳಿಗೆ ಪೊಲೀಸರು ತಿಳಿಸಿದರು. ಹತ್ಯೆ ನಡೆದ ಮನೆ ಇರುವ ಪ್ರದೇಶದಲ್ಲಿ ಸಾಕಷ್ಟು ಮನೆಗಳು ಒತ್ತೊತ್ತಾಗಿವೆ. ಆದ್ದರಿಂದ ದೆಹಲಿ ಜಲಮಂಡಳಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಿದ ಬಳಿಕವಷ್ಟೆ, ಪಿಪಿಇ ಧರಿಸಿದ ಪೊಲೀಸರು ಅಪರಾಧ ಸ್ಥಳಕ್ಕೆ ತೆರಳಿ ಸಾಕ್ಷ್ಯ ಸಂಗ್ರಹಿಸಿದರು.

‘ಮೂರು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಇವರಿಗೆ ಇದು ಎರಡನೇ ವಿವಾಹವಾಗಿತ್ತು. ಇಬ್ಬರಿಗೂ ಮೊದಲ ಮದುವೆಯಿಂದ ಮಕ್ಕಳಿದ್ದಾರೆ. ತಮ್ಮ ಹುಟ್ಟೂರಾದ ಬಿಹಾರದ ಮೋತಿಹಾರಿಯಲ್ಲಿ ವಾಸಿಸುತ್ತಿರುವ ಈ ಮಕ್ಕಳ ಭವಿಷ್ಯ ಕುರಿತು ಇಬ್ಬರೂ ಮಾತನಾ
ಡುತ್ತಿದ್ದರು. ಈ ವೇಳೆ ಪತ್ನಿ ಜತೆ ಜಗಳವಾಡಿದ ಪತಿ, ಕೋಲಿನಿಂದ ಆಕೆಯ ತಲೆಗೆ ಹೊಡೆದಿದ್ದಾನೆ. ಗಾಯದಿಂದಾಗಿ ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ’ ಎಂದು ಪೊಲೀಸರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.