ಬಂಧನ
ಪ್ರತಾಪಗಢ(ಉತ್ತರ ಪ್ರದೇಶ): ಹಿಂದೂ ಎಂದು ಸುಳ್ಳು ಹೇಳಿಕೊಂಡು ದೇವಾಲಯದಲ್ಲಿ ಹಿಂದೂ ಯುವತಿಯನ್ನು ವಿವಾಹವಾಗಿದ್ದ ಮುಸ್ಲಿಂ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ವ್ಯಕ್ತಿಯ ಬಗ್ಗೆ ಅನುಮಾನಗೊಂಡ ಬೆಲ್ಹಾ ಮಾಯಿ ದೇವಾಲಯದ ಮುಖ್ಯ ಅರ್ಚಕ ಮಂಗಳ ಪ್ರಸಾದ್ ಮಧ್ಯಪ್ರವೇಶದ ಬಳಿಕ ಕೃತ್ಯ ಬೆಳಕಿಗೆ ಬಂದಿದ್ದು, ಆರೋಪಿ ವಿರುದ್ಧ ಕ್ರಮ ಆರಂಭಿಸಲಾಗಿದೆ ಎಂದು ಪೂರ್ವ ವಿಭಾಗದ ಎಎಸ್‌ಪಿ ಶೈಲೇಂದ್ರ ಪ್ರಸಾದ್ ತಿಳಿಸಿದ್ದಾರೆ.
ದೇವಾಲಯದಲ್ಲಿ ಯುವತಿ ಮತ್ತು ವ್ಯಕ್ತಿ ಮದುವೆಯಾಗುತ್ತಿರುವುದನ್ನು ಗಮನಿಸಿದ ಅರ್ಚಕ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮದುಬೆಯಾದ ಜೋಡಿಯ ಹೆಸರನ್ನು ಕೇಳಿದಾಗ ನನಗೆ ಅನುಮಾನ ಹುಟ್ಟಿದೆ ಎಂದು ಅರ್ಚಕರು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಯುವತಿಯು ಪ್ರಯಾಗ್ ರಾಜ್‌ನ ಮಲಾಕದ ಶಾಲಿನಿ ಪ್ರತಾಪ್ ಎಂದು ತನ್ನ ಹೆಸರು ಹೇಳಿದರೆ, ವ್ಯಕ್ತಿಯು ಮಲಾಕದ ರಾಜೀವ್ ಎಂದು ಹೇಳಿದ್ದಾಗಿ ಅರ್ಚಕರು ದೂರಿನಲ್ಲಿ ಉಲ್ಲೇಕಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ವಿಚಾರಣೆ ವೇಳೆ ವ್ಯಕ್ತಿ ಬಳಿ ಆಧಾರ್ ಕಾರ್ಡ್ ಕೇಳಿದಾಗ, ಆತ ತನ್ನ ಹೆಸರು ಮತ್ಲೂಬ್ ಅಲಂ ಎಂದು ಹೇಳಿದ್ದು, ಪ್ರಯಾಗ್ ರಾಜ್‌ನ ಚಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಎಂದು ತಪ್ಪೊಪ್ಪಿಕೊಂಡಿದ್ಧಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಒತ್ತಾಯಪೂರ್ವಕವಾಗಿ ಪ್ರೇಮದ ಬಲೆಗೆ ಬೀಳಿಸಿಕೊಂಡಿದ್ದ ವ್ಯಕ್ತಿ, ಮತಾಂತರಕ್ಕೆ ಒತ್ತಡವನ್ನೂ ಹಾಕಿದ್ದ ಎಂದು ತಿಳಿದುಬಂದಿದೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಬಂಧಿತನ ವಿರುದ್ಧ ಕಾನೂನುಬಾಹಿರ ಮತಾಂತರ ತಡೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.