ADVERTISEMENT

ನಾಗಾಲ್ಯಾಂಡ್‌ ಸ್ಪೀಕರ್‌ ವಿಖೊ ನಿಧನ: ಪ್ರಧಾನಿ ಮೋದಿ ಕಂಬನಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 4:39 IST
Last Updated 31 ಡಿಸೆಂಬರ್ 2019, 4:39 IST
ವಿಖೊ–ಒ–ಯೊಶು
ವಿಖೊ–ಒ–ಯೊಶು   

ಕೊಹಿಮಾ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಾಗಾಲ್ಯಾಂಡ್‌ ವಿಧಾನಸಭೆ ಸ್ಪೀಕರ್‌ ವಿಖೊ–ಒ–ಯೊಶು (67) ನಿಧನರಾಗಿದ್ದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಬಿಜೆಪಿ ಮೈತ್ರಿಕೂಟದಲ್ಲಿರುವನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ (ಎನ್‌ಡಿಪಿಪಿ)ಯ ಹಿರಿಯ ನಾಯಕ ವಿಖೊ ಕಳೆದೊಂದು ವರ್ಷದಿಂದ ಮಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತ್ನಿ ಮತ್ತು 10 ಜನ ಮಕ್ಕಳನ್ನು ಅಗಲಿದ್ದಾರೆ.

ವಿಖೊನಾಗಾಲ್ಯಾಂಡ್‌ ಅಭಿವೃದ್ದಿಗಾಗಿ ಸಾಕಷ್ಟು ಶ್ರಮಿಸಿದ್ದರು. ಅವರ ನಿಧನ ನಾಗಾಲ್ಯಾಂಡ್‌ಗೆ ತುಂಬಲಾರದ ನಷ್ಟವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಟ್ವೀಟ್‌ ಮಾಡಿದ್ದಾರೆ.ವಿಖೊ ನಿಧನಕ್ಕೆ ನಾಗಾಲ್ಯಾಂಡ್‌ ಮುಖ್ಯಮಂತ್ರಿ ಹಾಗೂ ರಾಜ್ಯಪಾಲ ಬಿ.ಎನ್‌.ರವಿ ಕಂಬನಿ ಮಿಡಿದಿದ್ದಾರೆ.

2008 ಹಾಗೂ 2013ರಲ್ಲಿ ಎನ್‌ಪಿಎಫ್‌ನಿಂದ ಶಾಸಕರಾಗಿದ್ದರು. ನಂತರಎನ್‌ಡಿಪಿಪಿ ಸೇರಿ 2018ರಲ್ಲೂ ಶಾಸಕರಾಗಿ ಆಯ್ಕೆಯಾಗಿದ್ದರು.

ಮಂಗಳವಾರವಿಖೊ–ಒ–ಯೊಶು ಅವರ ಅಂತ್ಯಕ್ರಿಯೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.